ನವದೆಹಲಿ: ಮಾಹಿತಿ ವಿನಿಮಯ ಮಾಡಿಕೊಳ್ಳುವ ಮೂಲಕ ಸ್ವಿಟ್ಜರ್ಲ್ಯಾಂಡ್ ಭಾರತದ ಕಪ್ಪುಹಣದ ವಿರುದ್ಧದ ಹೋರಾಟಕ್ಕೆ ಸಹಾಯ ಮಾಡಲಿದೆ ಎಂದು ಭಾರತ ಪ್ರವಾಸದಲ್ಲಿರುವ ಸ್ವಿಸ್ ಅಧ್ಯಕ್ಷೆ ಡೋರಿಸ್ ಲ್ಯುಥರ್ಡ್ ಹೇಳಿದ್ದಾರೆ.
ಸ್ವಿಸ್ ಮತ್ತು ಭಾರತದ ನಡುವಣ 70 ದಶಕಗಳ ದ್ವಿಪಕ್ಷೀಯ ಬಾಂಧವ್ಯವನ್ನು ಸ್ಮರಿಸಿ ಮಾತನಾಡಿದ ಅವರು, ‘ಭಾರತ ಒಳ್ಳೆಯ ಸ್ನೇಹಿತ. 7 ದಶಕಗಳಿಂದ ನಾವು ಪರಸ್ಪರರ ಮಾತನ್ನು ಆಲಿಸಿದ್ದೇವೆ. ಸಲಹೆಗಳನ್ನು ನೀಡಿದ್ದೇವೆ.
ಮಾತ್ರವಲ್ಲದೇ ಪರಸ್ಪರರಿಂದ ಕಲಿತುಕೊಂಡಿದ್ದೇವೆ. ಇಂದು ನಮ್ಮ ಸಂಬಂಧ ಗಟ್ಟಿಯಾಗಿ ನಿಲ್ಲಲು ಅಡಿಪಾಯ ಎಂದಿದ್ದಾರೆ.
4 ದಿನಗಳ ಭಾರತ ಪ್ರವಾಸದಲ್ಲಿರುವ ಡೋರಿಸ್ ಪ್ರಧಾನಿಯೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.