ಸುಸೈಡ್ ಗೇಮ್ ಎಂದೇ ಕರೆಯಲ್ಪಡುವ, ಈಗಾಗಲೇ ಜಗತ್ತಿನಾದ್ಯಂತ ಹಲವರ ಸಾವಿಗೆ ಕಾರಣವಾಗಿರುವ ಬ್ಲೂವೇಲ್ ಗೇಮ್ಸ್ನ ಮಾಸ್ಟರ್ ಮೈಂಡ್ ಎಂದು ಶಂಕಿಸಲಾದ ರಷ್ಯಾದ 17 ವರ್ಷದ ಯುವತಿಯನ್ನು ಬಂಧನಕ್ಕೊಳಪಡಿಸಲಾಗಿದೆ.
ಬಂಧಿತ ಯುವತಿಯ ಪರಿಚಯವನ್ನು ಆಡಳಿತ ಇನ್ನೂ ಬಿಟ್ಟುಕೊಟ್ಟಿಲ್ಲ. ಆದರೆ ಆಕೆಯು ಟಾಸ್ಕ್ ಸಂಪೂರ್ಣಗೊಳಿಸದೇ ಹೋದರೆ ನಿಮ್ಮನ್ನು ಮತ್ತು ಮನೆಯವರನ್ನು ಕೊಲ್ಲುವುದಾಗಿ ಸಂತ್ರಸ್ಥರಿಗೆ ಬೆದರಿಕೆ ಹಾಕುತ್ತಿದ್ದಳು ಎನ್ನಲಾಗಿದೆ.
ಆಕೆಯ ಮನೆಯಲ್ಲಿ ಈ ಗೇಮ್ನ್ನು ಕಂಡುಹಿಡಿದ ಸೈಕೋಲಾಜಿ ವಿದ್ಯಾರ್ಥಿ ಫಿಲಿಪ್ ಬುಡೇಕಿನ್ ಚಿತ್ರಗಳು ದೊರೆತಿವೆ. ಮೂಲಗಳ ಪ್ರಕಾರ ಈಕೆ ಗೇಮ್ನ್ನು ಆಡಿದ್ದಾಳೆ ಆದರೆ ಟಾಸ್ಕ್ ಸಂಪೂರ್ಣಗೊಳಿಸಿಲ್ಲ. ಬದಲಾಗಿ ಗೇಮ್ನ ಆಡಳಿತಗಾರ್ತಿಯಾಗಿ ಬದಲಾಗಿದ್ದಾಳೆ.
ಬ್ಲೂವೇಲ್ ಖಿನ್ನತೆಯಲ್ಲಿರುವವರನ್ನೇ ಗುರಿಯಾಗಿಸುತ್ತದೆ ಮತ್ತು ಸುಸೈಡ್ನ್ನು ಥ್ರಿಲ್ಲಿಂಗ್ ಗೇಮ್ ಆಗಿ ಪರಿವರ್ತಿಸುತ್ತದೆ, ಸೈನ್ ಅಪ್ ಆದ ಬಳಿಕ ಆಟಗಾರರು 50 ದಿನದೊಳಗೆ ಸಾಯುವ ಟಾಸ್ಕ್ ಸಂಪೂರ್ಣಗೊಳಿಸಬೇಕಾಗುತ್ತದೆ.
ಈಗಾಗಲೇ ಈ ಗೇಮ್ಗೆ ಜಗತ್ತಿನಾದ್ಯಂತ 150 ಮಂದಿ ಬಲಿಯಾಗಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.