ನವದೆಹಲಿ: ಹಿಮಾಲಯದ ಕುಡಿಯುವ ನೀರನ್ನು ಮಾರಾಟ ಮಾಡಲು ಬಾಬಾ ರಾಮ್ದೇವ್ ಅವರ ಪತಂಜಲಿ ಸಂಸ್ಥೆ ಮುಂದಾಗಿದೆ.
‘ದಿವ್ಯ ಜಲ’ ಎಂಬ ಹೆಸರಲ್ಲಿ ಹಿಮಾಲಯದ ನೀರು ಇನ್ನು ಮುಂದೆ ಜನರಿಗೆ ದೊರಕಲಿದೆ. ಈ ದೀಪಾವಳಿ ವೇಳೆಗೆ ಅದು ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದೆ.
ಈಗಾಗಲೇ ಈ ನೀರಿನ ಬಾಟಲಿಗಳ ತಯಾರಿಕೆ ಆರಂಭವಾಗಿದೆ. ಇದರ ಬೆಲೆ ಎಷ್ಟು ಎಂಬುದನ್ನು ಪತಂಜಲಿ ಬಹಿರಂಗಪಡಿಸಿಲ್ಲ.
ಈಗಾಗಲೇ ಉತ್ಪನ್ನಗಳನ್ನು ವಿಸ್ತರಿಸುವ ಕಾರ್ಯ ಮಾಡುತ್ತಿರುವ ಪತಂಜಲಿ ಪರಿಧಾನ್ ಹೆಸರಲ್ಲಿ ಮಹಿಳೆ, ಪುರುಷ, ಮಕ್ಕಳಗಿಗಾಗಿ ಉಡುಪುಗಳನ್ನು ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.