News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೆ.ವಿ.ಜಿ.ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತಾಂತ್ರಿಕ ವಸ್ತು ಪ್ರದರ್ಶನ

ಸುಳ್ಯ: ಕೆ.ವಿ.ಜಿ. ಪಾಲಿಟೆಕ್ನಿಕ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ತಾಂತ್ರಿಕ ಅವಿಷ್ಕಾರ ಮಾದರಿಗಳ ಪ್ರದರ್ಶನವು ಕಾಲೇಜಿನ ಆವರಣದಲ್ಲಿ ನಡೆಯಿತು.

SUL-27MAR--Vastu-Pradarshan

ಕೆ.ವಿ.ಜಿ. ಸಮೂಹ ಸಂಸ್ಥೆಗಳ ಹಿರಿಯ ಕಾರ್ಯನಿರ್ವಹಣಾಧಿಕಾರಿ ಎನ್.ಜಿ.ರಾಮಚಂದ್ರ ವಸ್ತುಪ್ರದರ್ಶನ ಉದ್ಘಾಟಿಸಿದರು. ಕೆ.ವಿ.ಜಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಪ್ರೊ. ಮೇದಪ್ಪ , ಕೆ.ವಿ.ಜಿ ಐಟಿಐ ಪ್ರಾಂಶುಪಾಲ ಚಿದಾನಂದ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕಾಲೇಜಿನ ಪ್ರಾಂಶುಪಾಲ ಎನ್.ಆರ್.ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಚಂದ್ರಶೇಖರ ಬಿಳಿನೆಲೆ ಸ್ವಾಗತಿಸಿ, ವಂದಿಸಿದರು.

ವಸ್ತುಪ್ರದರ್ಶನದಲ್ಲಿ ಎಲೆಕ್ಟ್ರಿಕಲ್ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ಲೈಟಿಂಗ್ ಡಿಟೆಕ್ಟಿಂಗ್ ಆಂಡ್ ಪ್ರೊಟೆಕ್ಟರ್, ರೈಲ್ವೇ ಗೇಟ್ ಕಂಟ್ರೋಲರ್, ಆಂಡ್ರಾಯಿಡ್ ಬೇಸ್ಡ್ ಹೋಮ್ ಅಟೋಮೇಶನ್, ಅಟೋಮ್ಯಾಟಿಕ್ ಎನರ್ಜಿ ಮೀಟರ್, ಮೆಕಾನಿಕಲ್ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ಕಲ್ಲು ಕೆತ್ತುವ ಯಂತ್ರ, ಅಡಿಕೆ ಗೊನೆ ಬೇರ್ಪಡಿಸುವ ಯಂತ್ರ, ಅಟೋಮೋಬೈಲ್ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ಹೈಬ್ರಿಡ್ ಸ್ಕೂಟರ್, ತೋಟದೊಳಗೆ ಗೊಬ್ಬರ ಸಾಗಿಸುವ ವಾಹನ, ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ‘ಕಾರ್ ಟ್ರಾಕ್’ ಆಂಡ್ರಾಯಿಡ್ ಆಪ್.

ಆಂಡ್ರಾಯಿಡ್ ಬೇಸ್ಡ್ ವರ್ಚುವಲ್ ಮಾನಿಟರ್, ಇಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ಎಟಿಎಂ ಸೆಕ್ಯೂರಿಟಿ ಸಿಸ್ಟೆಮ್, ಜಿ.ಪಿ.ಎಸ್.ಬೇಸ್ಡ್ ಸೋಲ್ಜರ್ ಟ್ರಾಕಿಂಗ್, ಹ್ಯೂಮನ್ ಸೆನ್ಸಿಂಗ್ ಸಿಸ್ಟಮ್ ಮೊದಲಾದ 30ಕ್ಕೂ ಮಿಕ್ಕಿ ತಾಂತ್ರಿಕ ಮಾದರಿಗಳು ಗಮನ ಸೆಳೆದವು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top