ನವದೆಹಲಿ: ರೂ.50 ಮತ್ತು ರೂ.200ರ ಹೊಸ ನೋಟುಗಳನ್ನು ಚಲಾವಣೆಗೆ ತಂದ ಬಳಿಕ ಇದೀಗ ಆರ್ಬಿಐ 2016ರ ನವೆಂಬರ್ನಲ್ಲಿ ಅನಾಣ್ಯೀಕರಣಕ್ಕೊಳಗಾದ 1000.ರೂ ಮುಖಬೆಲೆಯ ನೋಟುಗಳನ್ನು ಮತ್ತೆ ಚಲಾವಣೆಗೆ ತರಲು ಮುಂದಾಗಿದೆ.
ರೂ.500 ಮತ್ತು ರೂ.2000ದ ಮಧ್ಯೆ ಇರುವ ದೊಡ್ಡ ಅಂತರವನ್ನು ಕುಗ್ಗಿಸುವ ಸಲುವಾಗಿ ಆರ್ಬಿಐ ಮತ್ತೆ 1 ಸಾವಿರ ರೂಪಾಯಿ ನೋಟುಗಳನ್ನು ಚಾಲ್ತಿಗೆ ತರಲು ನಿರ್ಧರಿಸಿದೆ.
ಮೈಸೂರು ಮತ್ತು ಸಲ್ಬೋನಿಯಲ್ಲಿ ನೋಟು ಮುದ್ರಣಾಲಯಗಳಲ್ಲಿ 1 ಸಾವಿರ ರೂಪಾಯಿ ಮುಖಬೆಲೆ ನೋಟುಗಳ ಮುದ್ರಣ ಕಾರ್ಯ ಆರಂಭಗೊಂಡಿದೆ.
ಕಡಿಮೆ ಮೌಲ್ಯದ ನೋಟುಗಳಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ 1 ಸಾವಿರ ನೋಟುಗಳು ಸಾಮಾನ್ಯರಿಗೆ ಅನುಕೂಲಕಾರಿಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.