ನವದೆಹಲಿ: ಕಳೆದ 7 ದಶಕಗಳಿಂದ ಏರ್ ಇಂಡಿಯಾ ಸ್ವಾಧೀನಪಡಿಸಿಕೊಂಡಿರುವ 300 ಕಲಾಕೃತಿಗಳನ್ನು ಪ್ರದರ್ಶಿಸುವ ಏರ್ ಇಂಡಿಯಾ ಮ್ಯೂಸಿಯಂ ಮುಂಬಯಿಯಲ್ಲಿ ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ಅನಾವರಣಗೊಳ್ಳಲಿದೆ.
ಕಳೆದ ಸ್ವಾತಂತ್ರ್ಯ ದಿನಾಚರಣೆಯಂದು ಇದು ಅನಾವರಣಗೊಳ್ಳಬೇಕಿತ್ತು. ಆದರೆ ಏರ್ ಇಂಡಿಯಾದ ಭವಿಷ್ಯದ ಬಗ್ಗೆ ಅಸ್ಥಿರತೆ ಉಂಟಾಗಿರುವ ಪರಿಣಾಮ ಮ್ಯೂಸಿಯಂ ಉದ್ಘಾಟನೆಯನ್ನು ಮುಂದೂಡಲಾಗಿದೆ.
ಮಹಾರಾಷ್ಟ್ರದ ಸಾಂಸ್ಕೃತಿಕ ಇಲಾಖೆ ಈ ಮ್ಯೂಸಿಯಂಗೆ 4ಕೋಟಿ ರೂಪಾಯಿ ಅನುದಾನ ನೀಡಿದೆ.
ವಿಎಸ್ ಗೋಯ್ತುಂಡೆ, ಎಂಎಫ್ ಹುಸೇನ್, ಅರ್ಪಣಾ ಕೌರ್, ಅಂಜೋಲಿ ಎಲ ಮೆನನ್, ಕೆಎ ಅರ ಅವರ ಪ್ರಸಿದ್ಧ ಪೇಂಟಿಂಗ್ಗಳು ಈ ಮ್ಯೂಸಿಯಂನಲ್ಲಿ ಇರಲಿದೆ. ಅಲ್ಲದೇ ಗುಜರಾತ್ ಮತ್ತು ದಕ್ಷಿಣ ಭಾರತದ ವುಡ್ ಆರ್ಟ್, ವಾಲ್ ಹ್ಯಾಂಗಿಂಗ್, ಟೆಕ್ಸ್ ಟೈಲ್ ಸೇರಿದಂತೆ ಭಾರತದ ಕರಕುಶಲಗಳ ಬೃಹತ್ ಸಂಗ್ರಹವೇ ಇಲ್ಲಿ ಇರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.