ಕೇವಲ ರಸ್ತೆಗಳನ್ನು ಸ್ವಚ್ಛವಾಗಿಡುವುದರಿಂದ, ಕಸ ಕಡ್ಡಿಗಳನ್ನು ಹೊರಕ್ಕೆ ಎಸಯದೇ ಇರುವುದದರಿಂದ ಮಾತ್ರ ಭಾರತ ಸ್ವಚ್ಛವಾಗಲು ಸಾಧ್ಯವಿಲ್ಲ. ದಿನನಿತ್ಯ ಸೃಷ್ಟಿಯಾಗುವ ಟನ್ಗಟ್ಟಲೆ ಕೈಗಾರಿಕ ತ್ಯಾಜ್ಯಗಳನ್ನು ಸಮರ್ಥವಾಗಿ ನಿರ್ವಹಣೆ ಮಾಡಿದಾಗ ಮತ್ತು ಅವುಗಳನ್ನು ಭೂಮಿ ಮೇಲೆ ಬಿಸಾಕದೆ ಇತರ ರೂಪದಲ್ಲಿ ಬಳಕೆ ಮಾಡಿದಾಗ ಮಾತ್ರ ಸ್ವಚ್ಛ ಭಾರತದ ನಿರ್ಮಾಣ ಸಾಧ್ಯವಾಗಲಿದೆ ಎಂದು ಬಿನಿಶ್ ದೇಸಾಯಿ ಹೇಳುತ್ತಾರೆ.
ಗುಜರಾತ್ನ ಇನ್ನೋವೇಟರ್ ಮತ್ತು ಸಾಮಾಜಿಕ ಉದ್ಯಮಿಯಾಗಿರುವ ಬಿನಿಶ್ ಅವರು ಕೈಗಾರಿಕ ತ್ಯಾಜ್ಯವನ್ನು ಬಳಸಿ ಇಟ್ಟಿಗೆ ನಿರ್ಮಿಸಿ ಅದರಲ್ಲಿ ಯಶಸ್ವಿಯಾದವರು.
ಪೇಪರ್ಮಿಲ್ನಲ್ಲಿನ ತ್ಯಾಜ್ಯಗಳನ್ನು ಬಳಸಿ ಅವರು ಪಿ-ಬ್ಲಾಕ್ ಇಟ್ಟಿಗೆಯನ್ನು ನಿರ್ಮಿಸುತ್ತಾರೆ. ಸ್ಥಿರ ಗ್ರಾಮೀಣ ಮೂಲಸೌರ್ಯ ಸೃಷ್ಟಿಗೆ ಅವರು ಪೇಟೆಂಟೆಡ್ ಟೆಕ್ನಾಲಜಿಯನ್ನು ಬಳಸುತ್ತಾರೆ.
23 ವರ್ಷದ ಬಿನಿಶ್ 11 ವರ್ಷದವರಿದ್ದಾಗಲೇ ಇಟ್ಟಿಗೆಯ ನಕಲು ಪ್ರತಿಯನ್ನು ವಿನ್ಯಾಸಪಡಿಸಿದ್ದರು. ಒಂದೊಂಮ್ಮೆ ಬಾಲ್ಯದಲ್ಲಿ ಚ್ಯೂಂಯ್ಗಂ ಬಟ್ಟೆಗೆ ಅಟ್ಟಿಕೊಂಡಾಗ ಅದನ್ನು ಪೇಪರ್ ಮೂಲಕ ತೆಗೆದು ಬಳಿಕ ಬಿಸಾಕಲು ಕಿಸೆಯೊಳಗೆ ಇಟ್ಟಿದ್ದರು. ಮರೆತು ಹೋಗಿ ಒಂದು ದಿನ ಬಿಟ್ಟು ನೋಡಿದಾಗ ಗಮ್ ಮತ್ತು ಪೇಪರ್ ಮಿಶ್ರವಾಗಿ ದಪ್ಪನಾದ ಇಟ್ಟಿಗೆಯಷ್ಟು ಗಟ್ಟಿಯಾಗಿತ್ತು. ಇದು ಇವರಿಗೆ ಪೇಪರ್ ಮತ್ತು ಚ್ಯುಂಗಮ್ ಬಳಸಿ ಇಟ್ಟಿಗೆ ತಯಾರಿಸುವ ಐಡಿಯಾ ನೀಡಿತು.
ಬಳಿಕ ಚ್ಯುಂಗಮ್ ಬದಲು ಆರ್ಗೆನಿಕ್ ಬೈಂಡರ್ ಬಳಸಿ ಪೇಪರ್ ಮೂಲಕ ಇಟ್ಟಿಗೆ ತಯಾರಿಸಿದರು. ಇದೀಗ ಈ ಇಟ್ಟಿಗೆಗಳನ್ನು ಅವರು ಗ್ರಾಮೀಣ ಭಾಗದಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಒದಗಿಸುತ್ತಿದ್ದಾರೆ. ಕೇವಲ ಪೇಪರ್ ಮಿಲ್ ತ್ಯಾಜ್ಯ ಮಾತ್ರವಲ್ಲದೇ ಇತರ ಕೈಗಾರಿಕೆಗಳ ತ್ಯಾಜ್ಯವನ್ನೂ ಮರು ಬಳಸಿ ಅವರು ಇತರ ವಸ್ತುಗಳನ್ನು ತಯಾರು ಮಾಡುತ್ತಿದ್ದಾರೆ. ಅವರ ಈ ಕಾರ್ಯ ಎಲ್ಲರ ಮನ್ನಣೆಗೆ ಪಾತ್ರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.