ಎಂಡಿ ಪದವಿ ಪೂರೈಸಿದ ಬಳಿಕ ಪ್ರತಿಯೊಬ್ಬ ವೈದ್ಯರೂ ಸಂಪ್ರದಾಯದಂತೆ ಆಸ್ಪತ್ರೆ ಅಥವಾ ಖಾಸಗಿ ಕ್ಲಿನಿಕ್ಗಳಲ್ಲಿ ಸೇವೆ ಸಲ್ಲಿಸುತ್ತಾರೆ, ಆದರೆ ಮಂಗಳೂರಿನ ಎಡ್ಮನ್ ಫೆರ್ನಾಂಡೀಸ್ ಇದಕ್ಕೆ ವಿರುದ್ಧ. ಅವರು ಎಂಡಿ ಪೂರೈಸಿದ ಬಳಿಕ ಸಾಗಿದ ಹಾದಿ ಎಲ್ಲರ ಮನ್ನಣೆಗೆ ಪಾತ್ರವಾಗಿದೆ.
26 ವರ್ಷದ ಎಡ್ಮನ್ ಆಸ್ಪತ್ರೆಯಲ್ಲೋ ಅಥವಾ ಕ್ಲಿನಿಕ್ನಲ್ಲೋ ಕಾರ್ಯ ನಿರ್ವಹಿಸುತ್ತಿಲ್ಲ. ಬದಲಿಗೆ ವಿಪತ್ತು ಉಂಟಾದ ಜಾಗಗಳಿಗೆ ತೆರಳಿ ಅಲ್ಲಿ ಅಗತ್ಯಬಿದ್ದವರಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದಾರೆ. ಈಗಾಗಲೇ ಅವರು ಮೂರು ವಿಪತ್ತು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಇತ್ತೀಚಿನ ಗುಜರಾತ್ ನೆರೆಯೂ ಸೇರಿದೆ.
2013ರಲ್ಲಿ ಹೈಯಾನ್ ತೂಫಾನ್ನಿಂದ ಕಂಗೆಟ್ಟಿದ್ದ ಫಿಲಿಫೈನ್ಸ್ಗೆ ತೆರಳಿ ಇವರು ಸೇವೆ ಮಾಡಿದ್ದರು. ಈ ವೇಳೆ ಇಲ್ಲಿ 6,300 ಜನರು ಅಸುನೀಗಿದ್ದರು. 2015ರಲ್ಲಿ ಚೆನ್ನೈ ಪ್ರವಾಹಕ್ಕೆ ತುತ್ತಾಗಿದ್ದ ವೇಳೆ ಅಲ್ಲಿಗೆ ತೆರಳಿ ಸೇವೆ ಮಾಡಿದ್ದರು. ಇದೀಗ ಗುಜರಾತ್ ನೆರೆ ಸಂತ್ರಸ್ಥರ ಸೇವೆ ಮಾಡುತ್ತಿದ್ದಾರೆ.
ಸೆಂಟರ್ ಫಾರ್ ಹೆಲ್ತ್ ಆಂಡ್ ಡೆವಲಪ್ ಮೂಲಕ ಇವರು ವಿಪತ್ತು ನಡೆದ ಸ್ಥಳಗಳಲ್ಲಿ ವೈದ್ಯಕೀಯ ಚಿಕಿತ್ಸೆ ನಿಡುತ್ತಾರೆ. ವಿವಿಧ ಸಂಸ್ಥೆಗಳೊಂದಿಗೆ ಕೈಜೋಡಿಸಿ ಅದರ ಮುಖೇನ ಇವರು ಸೇವೆ ನೀಡುತ್ತಾರೆ. ನವದೆಹಲಿಯ ಸೀಡ್ ಸಂಸ್ಥೆಯ ಮೂಲಕ ಇವರು ಗುಜರಾತ್ಗೆ ತೆರಳಿದ ಮೆಡಿಕಲ್ ಟೀಮ್ನ ನೇತೃತ್ವ ವಹಿಸಿದರು. ಇವರು ನಡೆಸಿದ ಕ್ಯಾಂಪ್ನಲ್ಲಿ 369 ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ.
ಸೆಂಟರ್ ಫಾರ್ ಹೆಲ್ತ್ ಡೆವಲಪ್ಮೆಂಟ್ನ ಸ್ಥಾಪಕ, ಕಾರ್ಯನಿರ್ವಾಹಣ ಅಧಿಕಾರಿಯಾಗಿರುವ ಇವರು, ಜಿಲ್ಲಾ ವಿಪತ್ತು ನಿರ್ವಹಣಾ ಮಂಡಳಿಯ ಟಾಸ್ಕ್ ಫೋರ್ಸ್ನ ಸದಸ್ಯನೂ ಆಗಿದ್ದಾರೆ.
ನಿರಂತರವಾಗಿ ಸೆಮಿನಾರ್, ಸಾಮರ್ತ್ಯ ನಿರ್ಮಾಣ ತರಬೇತಿ, ವಿಪತ್ತು ನಿರ್ವಹಣಾ ತರಬೇತಿಗಳನ್ನು ನೀಡುವ ಇವರ ಸೆಂಟರ್ ಫಾರ್ ಹೆಲ್ತ್ ಆಂಡ್ ಡೆವಲಪ್ಮೆಂಟ್ ಸಂಸ್ಥೆ ಮಂಗಳೂರಿನಲ್ಲಿ ಸೀಟ್ ಬೆಲ್ಟ್ ಕಡ್ಡಾಯಗೊಳಿಸಿರುವ ಹಿಂದಿರುವ ಶಕ್ತಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.