ಸೂರತ್: ಬೀದಿಯಲ್ಲಿ ಸಿಕ್ಕ ಬರೋಬ್ಬರಿ 45 ಲಕ್ಷ ರೂಪಾಯಿ ಮೌಲ್ಯದ ವಜ್ರಗಳಿದ್ದ ಪ್ಯಾಕೆಟ್ನ್ನು ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆಯನ್ನು ಮರೆದ ಬಡ ತಂದೆ ಮತ್ತು ಮಗನಿಗೆ ಸೂರತ್ ಡೈಮಂಡ್ ಅಸೊಸಿಯೇಶನ್ ಸನ್ಮಾನ ಮಾಡುವ ಮೂಲಕ ಗೌರವಿಸಿದೆ.
ವಜ್ರದ ದಲ್ಲಾಳಿ ಮಂಸೂಕ್ಭಾಯ್ ಸವಾಲಿಯಾ ಅವರು ವಜ್ರ ಸಂಗ್ರಹಿಸಿ ತೆರಳುತ್ತಿದ್ದ ವೇಳೆ ಅವರ ಬ್ಯಾಗ್ನಲ್ಲಿದ್ದ ವಜ್ರ ತುಂಬಿದ ಪ್ಯಾಕೆಟ್ಗಳ ಪೈಕಿ ಒಂದು ಪ್ಯಾಕೆಟ್ ಕೆಳಕ್ಕೆ ಬಿದ್ದಿತ್ತು. ಇದನ್ನು ಅವರು ಗಮನಿಸದೆ ಮುಂದೆ ಸಾಗಿದ್ದರು.
ಈ ವೇಳೆ ಕ್ರಿಕೆಟ್ ಆಡುತ್ತಿದ್ದ 15 ವರ್ಷದ ವಿಶಾಲ್ ಉಪಾಧ್ಯಯ ಎಂಬ ಬಾಲಕ ಅದನ್ನು ನೋಡಿ ಮನೆಗೆ ತೆಗೆದುಕೊಂಡು ಹೋಗಿ ತಂದೆಗೆ ನೀಡಿದ್ದ.
ವಾಚ್ಮನ್ ಆಗಿರುವ ಆತನ ತಂದೆ ಫುಲ್ಚಂದ್ ಅವರು ಅದರಲ್ಲಿ ವಜ್ರ ಇರುವುದನ್ನು ಗಮನಿಸಿ ತಕ್ಷಣವೇ ಡೈಮಂಡ್ ಅಸೋಸಿಯೇಶನ್ಗೆ ತಂದು ಕೊಟ್ಟಿದ್ದರು. ಅಸೋಸಿಯೇಶನ್ ಅದರ ನಿಜವಾದ ಮಾಲೀಕನನ್ನು ಪತ್ತೆ ಹಚ್ಚಿ ಅವರಿಗೆ ವಾಪಾಸ್ ನೀಡಿದೆ.
ಪ್ರಾಮಾಣಿಕತೆ ಮೆರೆದ ವಿಶಾಲ್ ಮತ್ತು ಫುಲ್ಚಂದ್ ಅವರಿಗೆ ಸನ್ಮಾನವನ್ನೂ ಮಾಡಿದೆ. ಅಲ್ಲದೇ ವಿಶಾಲ್ನ ಸಂಪೂರ್ಣ ಶಿಕ್ಷಣದ ವೆಚ್ಚವನ್ನು ಭರಿಸುವುದಾಗಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.