ನವದೆಹಲಿ: ದೇಶದ ಅತೀದೊಡ್ಡ ಗಡಿ ರಕ್ಷಣಾ ಪಡೆ ಬಿಎಸ್ಎಫ್ ಸೈನಿಕರ ಖಿನ್ನತೆ ಮತ್ತು ಆತ್ಮಹತ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಎರಡು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಆರಂಭಿಸಿದೆ.
ಬಿಎಸ್ಎಫ್ ತನ್ನ ವಾರ್ಷಿಕ ಮೆಡಿಕಲ್ ಚೆಕ್ಅಪ್ನಲ್ಲಿ ‘ವೆಲ್ನೆಸ್ ಕೋಟಿಯಂಟ್ ಅಸೆಸ್ಮೆಂಟ್’ನ್ನು ಪರಿಚಯಿಸಿದೆ.
ಸದ್ಯಕ್ಕೆ ಪಾಕ್ ಮತ್ತು ಬಾಂಗ್ಲಾದೊಂದಿಗಿನ ಗಡಿಯನ್ನು ಕಾಯುತ್ತಿರುವ 2.65 ಲಕ್ಷ ಸೈನಿಕರ ಪೈಕಿ ನಿರ್ದಿಷ್ಟ ಜಾಗಗಳ ಒಂದಿಷ್ಟು ಮಹಿಳಾ ಮತ್ತು ಪುರುಷ ಯೋಧರ ಟ್ರೂಪ್ಗಳನ್ನು ಆಯ್ಕೆ ಮಾಡಿ ಅವರಿಗೆ ಪರೀಕ್ಷಾರ್ಥ ಯೋಜನೆಯನ್ನು ಒದಗಿಸಲಾಗುತ್ತದೆ. ಮುಂಬರುವ ದಿನಗಳಲ್ಲಿ ಎಲ್ಲಾ ಸೈನಿಕರಿಗೂ ಇದು ಲಭ್ಯವಾಗಲಿದೆ.
ಖಿನ್ನತೆಗೊಳಗಾಗಿರುವ ಸೈನಿಕರನ್ನು ಗುರುತಿಸಿ ಅವರಿಗೆ ಸೂಕ್ತ ಸ್ಪಂದನೆಯನ್ನು ನೀಡುವ ಕಾರ್ಯವನ್ನೂ ಮಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.