ಶ್ರೀನಗರ: ಜಮ್ಮು ಕಾಶ್ಮೀರ ಸರ್ಕಾರ ರಜೌರಿ ಜಿಲ್ಲೆಯ ವಾಸ್ತವ ಗಡಿ ರೇಖೆಯ ಸಮೀಪದ ಗ್ರಾಮಗಳಲ್ಲಿ 100 ಬಂಕರ್ಗಳನ್ನು ನಿರ್ಮಿಸುವ ಕಾರ್ಯವನ್ನು ಆರಂಭಿಸಿದೆ. ಪಾಕಿಸ್ಥಾನ ಪಡೆಗಳು ನಿರಂತರವಾಗಿ ಕದನವಿರಾಮ ಉಲ್ಲಂಘನೆ ಮಾಡುತ್ತಿರುವ ಪ್ರದೇಶಗಳಲ್ಲಿ ಬಂಕರ್ಗಳು ನಿರ್ಮಾಣಗೊಳ್ಳುತ್ತಿದೆ.
ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ನ ವಾಸ್ತವ ಗಡಿ ರೇಖೆಯ ಗ್ರಾಮಗಳಲ್ಲಿ 100 ಬಂಕರ್ಗಳು ನಿರ್ಮಾಣವಾಗುತ್ತಿವೆ ಎಂಬುದನ್ನು ರಜೌರಿಯ ಉಪ ಜಿಲ್ಲಾಧಿಕಾರಿ ಡಾ.ಶಹೀದ್ ಇಕ್ಬಾಲ್ ಚೌಧುರಿ ಸ್ಪಷ್ಟಪಡಿಸಿದ್ದಾರೆ.
ಕದನವಿರಾಮ ಉಂಟಾದಾಗ ಅದರಲ್ಲೂ ಶಲ್ ದಾಳಿಗಳು ನಡೆದಾಗ ಈ ಬಂಕರ್ಗಳು 1200-1500 ಜನರಿಗೆ ಆಶ್ರಯವನ್ನು ಒದಗಿಸಲಿದೆ ಎಂದಿದ್ದಾರೆ.
100 ಬಂಕರ್ಗಳ ನಿರ್ಮಾಣ ಸರ್ಕಾರದ ಪ್ರಾಯೋಗಿಕ ಯೋಜನೆಯಾಗಿದ್ದು, ಮುಂಬರುವ ದಿನಗಳಲ್ಲಿ ಇಂತಹ 6121 ಬಂಕರ್ ನಿರ್ಮಾಣಗಳನ್ನು ಮಾಡುವ ಯೋಜನೆ ಸರ್ಕಾರದ ಮುಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.