ಲಂಡನ್: ಯುಕೆಯಲ್ಲಿ ನೆಲೆಸಿರುವ ಭಾರತೀಯರು 70 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಂಡನ್ನ ಐತಿಹಾಸಿಕ ಪಾರ್ಲಿಮೆಂಟ್ ಸರ್ನಿಂದ ಒಂದು ಮೈಲಿ ದೂರದವರೆಗೆ ಫ್ರೀಡಂ ರನ್ ಆಯೋಜನೆಗೊಳಿಸಿದ್ದರು.
‘ಇಂಡಿಯಾ@70’ ಎಂಬ ಟಿ-ಶರ್ಟ್ ಧರಿಸಿ ಮತ್ತು ತಿರಂಗ ಹಿಡಿದು ನೂರಾರು ಮಂದಿ ಇದರಲ್ಲಿ ಭಾಗಿಯಾಗಿದ್ದರು.
Parliament Squareನ ಮಹಾತ್ಮ ಗಾಂಧಿ ಪ್ರತಿಮೆಯ ಸಮೀಪ ಈ 1 ಮೈಲಿ ಓಟಕ್ಕೆ ಚಾಲನೆ ನೀಡಲಾಯಿತು. ಲಂಡನ್ನಿನ ಭಾರತೀಯ ಹೈ ಕಮಿಷನ್ ಸಮೀಪ ಇದು ಅಂತ್ಯಗೊಂಡಿತು. ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಎನ್ನುತ್ತಾ ಓಟಗಾರರು ಓಟ ಮುಗಿಸಿದರು.
ಭಾರತೀಯ ಸಮುದಾಯವನ್ನು ಒಟ್ಟು ಸೇರಿಸುವ ಸಲುವಾಗಿ ಅಲ್ಲಿನ ಭಾರತೀಯ ಹೈ ಕಮಿಷನ್ ಈ ಕಾರ್ಯಕ್ರಮವನ್ನು ಆಯೋಜನೆಗೊಳಿಸಿತ್ತು.
ಮಧ್ಯರಾತ್ರಿ ವೇಳೆ ಓಟ ಮುಕ್ತಾಯಗೊಂಡಿತ್ತು, ಯುಕೆಯಲ್ಲಿನ ಭಾರತೀಯ ಹೈ ಕಮಿಷನರ್ ವೈ.ಕೆ.ಸಿನ್ಹಾ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.