×
Home About Us Advertise With s Contact Us

70 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ : 1947 ರ ಮೆನುಗಳಲ್ಲಿರುವುದನ್ನು 1947 ರೂ.ಗೆ ನೀಡಲಿದೆ ತಾಜ್‌ಮಹಲ್ ಹೋಟೆಲ್

ಮುಂಬೈ : 70 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮುಂಬೈಯ ತಾಜ್‌ಮಹಲ್ ಹೋಟೆಲ್ ತಿಂಡಿ ಪ್ರಿಯರಿಗೆ ಶುಭ ಸುದ್ದಿಯನ್ನು ನೀಡಿದೆ. 1947  ರ ಸಂದರ್ಭದಲ್ಲಿನ ಖಾದ್ಯಗಳನ್ನು ಕೇವಲ 1947  ರೂ.ಗಳಿಗೆ ಇದು ನೀಡಲಿದೆ.

ಆಗಸ್ಟ್ 12 ರಿಂದ ಆಗಸ್ಟ್ 15 ರ ವರೆಗೆ ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ, ಲಂಡನ್, ಕೊಲ್ಕತ್ತಾಗಳ ತಾಜ್ ಹೋಟೆಲ್‌ಗಳಲ್ಲಿ 1947 ರ ಖಾದ್ಯಗಳು 1947 ರೂ.ಗೆ ಲಭ್ಯವಾಗಲಿದೆ.

1903 ರಲ್ಲಿ ತಾಜ್ ಹೋಟೆಲ್ ಸ್ಥಾಪನೆಯಾಗಿದ್ದು ತನ್ನ ಇಂಡೋ-ಫ್ರೆಂಚ್ ಖಾದ್ಯಗಳಿಗೆ ಇದು ಪ್ರಸಿದ್ಧಿ ಪಡೆದಿದೆ. ಮೆನುವು ಕಾನ್ಸಾಮೆ ಎ ಎಲ್ ಇಂಡಿಯೆನ್ನೆ, ಭಾರತದ  ಮಸಾಲೆಗಳನ್ನು ಹೊಂದಿದ ಟೊಮೇಟೋ ಸೂಪ್, ವೆಲ್ಲೌಟ್ ಡಿ ಅಮಂಡಾಸ್ ಸೂಪ್, ಎಲ್-ಹಿಂದುಸ್ಥಾನ್, ಪಾಪಿಯೆಟ್ಟೆ ಡೆ ಸೌಮನ್ ಜಾಯ್ವಿಲ್ಲೆ, ಪೌಲಾರ್ಡ್ ಸೌಫಲ್ ಇಂಡಿಪೆಂಡೆನ್ಸ್ ಈ ರೀತಿಯ ಖಾದ್ಯಗಳು ಲಭ್ಯವಿರಲಿದೆ. ಈ ಖಾದ್ಯಗಳನ್ನು ಸ್ಟೀಲ್ ಗ್ಲಾಸ್ ಮತ್ತು ಪಾರ್ಕಿಂಗ್ ವೈನ್‌ಗಳೊಂದಿಗೆ ನೀಡಲಾಗುತ್ತದೆ. ಇವುಗಳ ಬೆಲೆ ಕೇವಲ 1947 ರೂ. ಆಗಿದೆ.  ಈ ಸಂದರ್ಭ ಮೂರು ಬ್ಯಾಂಡ್ ತಂಡಗಳು, ಸ್ಯಾಕ್ಸೋಫೋನ್ ವಾದಕರು, ಪಿಯಾನೋ ವಾದಕರು ಮತ್ತು ಹಾಡುಗಾರರು ಸಂಗೀತದೊಂದಿಗೆ ರಂಜಿಸಲು ಇರಲಿದ್ದಾರೆ.

ಇದೀಗ 70 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆ ಸಂದರ್ಭದಲ್ಲಿ ಲಭ್ಯವಾಗುತ್ತಿದ್ದ ಪ್ರಸಿದ್ಧ ಖಾದ್ಯಗಳನ್ನು ಸವಿಯುವ ಅವಕಾಶ ಗ್ರಾಹಕರಿಗೆ ಸಿಕ್ಕಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top