ನವದೆಹಲಿ : ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಭಾರತ ಮತ್ತು ಪಾಕಿಸ್ಥಾನದಲ್ಲಿರುವ ಹಲವರಿಗೆ ವಿಭಿನ್ನವಾಗಿರಲಿದೆ.
ಈ ಬಾರಿ ರಾಬಿನ್ ಹುಡ್ ಆರ್ಮಿ ಮಿಷನ್ 1 ಮಿಲಿಯನ್ (#Mission1Million) ಎಂಬ ಅಭಿಯಾನವನ್ನು ಆರಂಭಿಸಿದ್ದು. ಇದರಡಿ ಭಾರತ ಮತ್ತು ಪಾಕಿಸ್ಥಾನದ ಯುವಕರು ಪರಸ್ಪರ ಕೈಜೋಡಿಸಿ ಆಗಸ್ಟ್ 14 ಮತ್ತು 15 ರಂದು 1 ಮಿಲಿಯನ್ ಹಸಿದ ಜನರಿಗೆ ಆಹಾರವನ್ನು ಒದಗಿಸಲಿದ್ದಾರೆ.
ದೇಶದ 41 ನಗರಗಳಲ್ಲಿನ ರಾಬಿನ್ ಆರ್ಮಿಯ ಸುಮಾರು 10,000 ಜನರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಖಾಸಗಿ ಮತ್ತು ನಾಗರೀಕ ಸಮಾಜದ ಸಹಾಯವನ್ನು ಪಡೆದು ಅವರು ಈ ಕಾರ್ಯವನ್ನು ಮಾಡಲಿದ್ದಾರೆ.
ಅನಾಥಾಶ್ರಮಗಳು, ವೃದ್ಧಾಶ್ರಮಗಳು, ನಿರ್ಗತಿಕರು ಮತ್ತು ರೋಗಿಗಳಿಗೆ ಆಹಾರವನ್ನು ಒದಗಿಸುವ ಉದ್ದೇಶವನ್ನು ಮಿಷನ್ 1 ಮಿಲಿಯನ್ ಅಭಿಯಾನ ಹೊಂದಿದೆ. ದೇಶಾದ್ಯಂತ 5,00,000 ನಾಗರಿಕರಿಗೆ ಆಹಾರವನ್ನು ಒದಗಿಸಲಿದೆ ಎನ್ನಲಾಗಿದೆ.
ಹಸಿವೆಯ ವಿರುದ್ಧದ ಅತಿ ದೊಡ್ಡ ಹೋರಾಟ ಇದು ಎಂದು ಹೇಳಲಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲಿನ ಜನರು ಈ ವಿಭಿನ್ನ ಅಭಿಯಾನದಲ್ಲಿ ಕೈಜೋಡಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.