ವಾಘಾ : ಪಂಜಾಬ್ನ ವಾಘಾ ಅಟಾರಿ ಗಡಿಯಲ್ಲಿ ಭಾರತದ ಅತಿ ಉದ್ದದ ತಿರಂಗಾವನ್ನು ಭಾನುವಾರ ಹಾರಿಸಲಾಗಿದೆ. 360 ಅಡಿ ಉದ್ದದ ಈ ಧ್ವಜವನ್ನು ಅತಿ ಪ್ರಮುಖ ಸಂದರ್ಭಗಳಲ್ಲಿ ಮಾತ್ರ ಹಾರಿಸಲಾಗುತ್ತದೆ.
ಈ ಧ್ವಜದ ಉದ್ದ 120 ಅಡಿ ಇದ್ದು, ಅಗಲ 80 ಅಡಿ ಇದೆ. 360 ಅಡಿ ಎತ್ತರದ ಕಂಬದಲ್ಲಿ ಇದನ್ನು ಹಾರಿಸಲಾಗುತ್ತದೆ. ಪಾಕಿಸ್ಥಾನದಲ್ಲಿ ನಿಂತು ನೋಡಿದರೂ ಈ ಧ್ವಜ ಕಾಣುತ್ತದೆ.
ಈ ಅತಿ ಉದ್ದದ ಧ್ವಜವನ್ನು 4 ಬಾರಿ ಬದಲಾಯಿಸಲಾಗಿದೆ. ಬಿರುಗಾಳಿ ಮತ್ತು ಪ್ರತಿಕೂಲ ಹವಾಮಾನಗಳಿಂದಾಗಿ ಈ ಧ್ವಜವನ್ನು ಆಗಾಗ ಬದಲಾಯಿಸಬೇಕಾಗುತ್ತದೆ.
ಇದೀಗ ಭಾನುವಾರ 3 ತಿಂಗಳ ಬಳಿಕ ಈ ಧ್ವಜವನ್ನು ಹಾರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.