ಬಂಟ್ವಾಳ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಬಂಟ್ವಾಳ ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಅಂಗವಾಗಿ ಆದಿತ್ಯವಾರ ಸಂಜೆ 4.30 ಕ್ಕೆ ಬಿಸಿರೋಡು ರಕ್ತೇಶ್ವರೀ ದೇವಸ್ಥಾನದ ವಠಾರದಿಂದ ಪನೋಲಿಬೈಲು ಕಲ್ಲುರ್ಟಿ ದೈವಸ್ಥಾನದವರೆಗೆ ದ್ವಿಚಕ್ರ ವಾಹನ ಜಾಥಾ ನಡೆಯಿತು. ಬಿಸಿರೋಡು ರಕ್ತೇಶ್ವರೀ ದೇವಸ್ಥಾನದ ವಠಾರದಲ್ಲಿ ಈ ವಾಹನ ಜಾಥಾವನ್ನು ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು ತೆಂಗಿನಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ದೇಶದ ಅಚಾರ ವಿಚಾರಗಳ ಬದಲಾವಣೆಯ ಕಾಲಗಟ್ಟದಲ್ಲಿ ಯುವಕರ ಚಿಂತನೆ ಕೂಡಾ ಬದಲಾಗುತ್ತಿದೆ, ಯುವ ಸಮೂಹ ಉತ್ತಮ ವಿಚಾರಗಳನ್ನು ಚಿಂತನೆ ಮಾಡುತ್ತಾ ದೇಶವನ್ನು ಬಲಿಷ್ಟ ಮಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದನ್ನು ಈ ಸಂದರ್ಭ ತಿಳಿಸಲು ಸಂತೋಷವಾಗುತ್ತದೆ ಎಂದರು. ದೇಶ ಭಕ್ತಿಯ ಹೋರಾಟಕ್ಕೆ ಈ ಸಂಘಟನೆಗಳ ಪಾತ್ರ ಹೆಚ್ಚು ಮಹತ್ತರವಾದುದು ಎಂದರುರೀ ಸಂದರ್ಭ ಬಜರಂಗದಳ ಜಿಲ್ಲಾ ಸಂಚಾಲಕ ಬಾಸ್ಕರ ಧರ್ಮಸ್ಥಳ, ಜಿಲ್ಲಾ ಸಹ ಪ್ರಮುಖ್ ಗುರುರಾಜ್ ಬಂಟ್ವಾಳ್, ಪ್ರಮುಖರಾದ ಪ್ರಕಾಶ್ ಬೆಳ್ಳೂರು, ಸುರೇಶ್ ಬೆಂಜನಪದವು, ಜಿತೇಂದ್ರ ಕೊಟ್ಯಾನ್ ಅಜ್ಜಿಬೆಟ್ಟು, ಸಚಿನ್ ಅಮ್ಮುಂಜೆ, ಧಕ್ಷಣ್ ಸಜೀಪ ಲೋಹಿತ್ ಪನೋಲಿಬೈಲು ಮತ್ತಿತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.