ವೃತ್ತಿಯಲ್ಲಿ ಎಂಜಿನಿಯರಿಂಗ್ ಆಗಿದ್ದರೂ ರೈತನಾಗಿ ಬದುಕು ಕಂಡಿಕೊಂಡಿರುವ ಆಂಧ್ರಪ್ರದೇಶದ ರವಿ ಮರ್ಶೆತ್ವರ್ ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ಬಳಸಿ ಇಂದು ತಮ್ಮ ಕೃಷಿಭೂಮಿಯಲ್ಲಿ ಬರೋಬ್ಬರಿ 51 ಬಗೆಯ ಮಾವನ್ನು ಒಂದೇ ಮರದಲ್ಲಿ ಬೆಳೆಯುವಂತೆ ಮಾಡಿದ್ದಾರೆ.
ಮಸ್ಕತ್ನಲ್ಲಿ 10 ವರ್ಷ ದುಡಿದು ತಯ್ನಾಡಿಗೆ ವಾಪಾಸ್ ಬಂದು ರೈತನಾಗಿರುವ ರವಿ ಇಂದು ಸಾಧಕ ರೈತರ ಸಾಲಿನಲ್ಲಿ ನಿಂತು ಇತರ ರೈತರಿಗೆ ಮಾದರಿ ಎನಿಸಿದ್ದಾರೆ. ರೈತರು ಎದುರಿಸುತ್ತಿರು ಸಂಕಷ್ಟಗಳಿಗೆ ಪರಿಹಾರ ನೀಡುವ ಉದ್ದೇಶದಿಂದಲೇ ತಮ್ಮ ತಂದೆಯಿಂದ ಸ್ಫೂರ್ತಿ ಪಡೆದು ಅವರು ರೈತರಾದರು.
ಸುತ್ತಮುತ್ತಲ ರೈತರಿಗೆ ನೂತನ ತಂತ್ರಜ್ಞಾನದ ಬಗ್ಗೆ, ಕೃಷಿ ಪದ್ಧತಿಗಳ ಬಗ್ಗೆ ಅರಿವು ಮೂಡಿಸುತ್ತಲೇ ತಮ್ಮ ಪೂರ್ವಿಕರ 5 ಎಕರೆ ಭೂಮಿಯಲ್ಲಿ ಇವರು ಅದ್ಭುತವನ್ನು ಸೃಷ್ಟಿಸಿದ್ದಾರೆ.
ಕೃಷಿಯಲ್ಲಿ ಅದರಲ್ಲೂ ಮುಖ್ಯವಾಗಿ ಮಾವಿನ ಬೆಳೆಯಲ್ಲಿ ಹಲವಾರು ಎಕ್ಸ್ಪೆರಿಮೆಂಟ್ ಮಾಡಿರುವ ಇವರು, ಒಂದೇ ಮಾವಿನ ಮರದಲ್ಲಿ 51 ಬಗೆಯ ಮಾವು ಬೆಳೆಯುವಂತೆ ಮಾಡಿ ಎಲ್ಲರ ನಿಬ್ಬೆರಗಾಗಿಸಿದ್ದಾರೆ. ಕೃಷಿ ವಲಯದಲ್ಲಿ ಇದು ಅವರು ಮಾಡಿದ ಅತೀ ದೊಡ್ಡ ಸಾಧನೆ.
ಜೂನ್-ಆಗಸ್ಟ್ ತಿಂಗಳಲ್ಲಿ ಹಲವಾರು ಭಾಗಗಳ ರೈತರು ಇವರ ಬಳಿಗೆ ಆಗಮಿಸಿ ಇವರಿಂದ ನೂತನ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ತಮ್ಮ ಜ್ಞಾನ, ಕೌಶಲ್ಯವನ್ನು ಇತರ ರೈತರಿಗೂ ತಿಳಿಸಿಕೊಂಡು ಅವರ ಬದುಕೂ ಬೆಳಗಾಗುವಂತೆ ಇವರು ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.