ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುತ್ತಿರುವುದು ಗೌರವವೆನಿಸುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕ ಟ್ರಂಪ್ ಹೇಳಿದ್ದಾರೆ.
ಇವಂಕಾ ಅವರು ಟ್ರಂಪ್ ಅವರ ಸಲಹೆಗಾರ್ತಿಯೂ ಆಗಿದ್ದು, ಭಾರತದಲ್ಲಿ ನಡೆಯುತ್ತಿರುವ ಗ್ಲೋಬಲ್ ಎಂಟರ್ಪ್ರೆನರ್ಶಿಪ್ ಸಮಿತ್ನಲ್ಲಿ ಅಮೆರಿಕಾ ನಿಯೋಗದ ನೇತೃತ್ವ ವಹಿಸಲಿದ್ದಾರೆ. ಈ ವೇಳೆ ಮೋದಿಯನ್ನು ಭೇಟಿಯಾಗಲಿದ್ದಾರೆ.
ಈ ಹಿನ್ನಲೆಯಲ್ಲಿ ಟ್ವಿಟರ್ ಮೂಲಕ, ‘ಮೋದಿಯವರನ್ನು ಭೇಟಿಯಾಗುತ್ತಿರುವುದಕ್ಕೆ ಗೌರವವೆನಿಸುತ್ತದೆ’ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮೋದಿ, ’ಹೈದರಾಬಾದಿನಲ್ಲಿನ ಗ್ಲೋಬಲ್ ಎಂಟರ್ಪ್ರೆನರ್ಶಿಪ್ ಸಮಿತ್ನಲ್ಲಿ ಯುಎಸ್ ನಿಯೋಗದ ನಾಯಕಿಯಾಗಿ ಇವಾಂಕ ಟ್ರಂಪ್ ಅವರ ಹಾಜರನ್ನು ಎದುರು ನೋಡುತ್ತಿದ್ದೇವೆ’ ಎಂದು ಟ್ವಿಟ್ ಮಾಡಿದ್ದಾರೆ.
ನವೆಂಬರ್ 28-30ರವರೆಗೆ ಗ್ಲೋಬಲ್ ಎಂಟರ್ಪ್ರೆನರ್ಶಿಪ್ ಸಮಿತ್ನ್ನು ಅಮೆರಿಕಾ ಮತ್ತು ಭಾರತ ಜಂಟಿಯಾಗಿ ಹೈದರಾಬಾದ್ನಲ್ಲಿ ಆಯೋಜನೆ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.