ಪ್ರಕೃತಿಯನ್ನು ನಾವು ಗೌರವಿಸಿದರೆ ಅದು ನಮ್ಮನ್ನು ಗೌರವಿಸುತ್ತದೆ ಎನ್ನುವ ತೆನ್ಜೀನ್ ಬೊಡೊಸಾ ಅಸ್ಸಾಂನ ಅಪ್ಪಟ ಪ್ರಕೃತಿ ಪ್ರೇಮಿ ರೈತ. ಉದಲ್ಗರಿ ಜಿಲ್ಲೆಯಲ್ಲಿ ಇವರು ಹೊಂದಿರುವ ಫಾರ್ಮ ಇತ್ತೀಚಿಗಷ್ಟೇ ಜಗತ್ತಿನ ಮೊಲದ ಆನೆ ಸ್ಮೇಹಿ ಫಾರ್ಮ್ ಎಂಬ ಸರ್ಟಿಫಿಕೇಟ್ನ್ನು ಪಡೆದುಕೊಂಡಿದೆ.
ಆರು ವರ್ಷದವರಿದ್ದಾಗಲೇ ತಂದೆಯನ್ನು ಕಳೆದುಕೊಂಡ ಪರಿಣಾಮ ಕೃಷಿ ಕೆಲಸ ಮಾಡಲು ಆರಂಭಿಸಿದ ಇವರಿಗೆ ರೈತನಾಗಲು ಇಷ್ಟವೇ ಇರಲಿಲ್ಲ. ಆರನೇ ಕ್ಲಾಸಗೆಯೇ ಶಾಲೆ ತೊರೆದು ಮಲೇಷ್ಯನ್ ಕನ್ಸ್ಟ್ರಕ್ಷನ್ ಕಂಪನಿಯೊಂದಕ್ಕೆ ಸೇರಿ ಡ್ರೈವಿಂಗ್, ಮೆಶಿನ್ ರಿಪೇರಿ ಮುಂತಾದುವುಗಳನ್ನು ಕಲಿತರು. ಇಂಗ್ಲೀಷ್ನ್ನೂ ಕರಗತ ಮಾಡಿಕೊಂಡರು. ಆದರೆ ಮಗ ಮನೆಗೆ ವಾಪಾಸ್ ಬಂದು ಗದ್ದೆಯಲ್ಲೇ ದುಡಿಯಲಿ ಎಂಬುದು ಇವರ ವಯಸ್ಸಾದ ತಾಯಿಯ ಬಯಕೆಯಾಗಿತ್ತು.
ಕೊನೆಗೂ 2006ರಲ್ಲಿ ಮನೆಗೆ ವಾಪಾಸ್ಸಾದ ಇವರು ಕೃಷಿ ಕೆಲಸ ಆರಂಭಿಸಿದರು. ಹಿರಿಯರಿಂದ ಬಂದ ಎರಡು ಎಕರೆ ಕೃಷಿಭೂಮಿ ನೋಡಿಕೊಳ್ಳುವ ಜವಾಬ್ದಾರಿ ಅವರ ಮೇಲೆ ಬಿತ್ತು. ಟೀಗೆ ಒಳ್ಳೆ ಬೇಡಿಕೆಯಿದ್ದರಿಂದ ಟೀ ಬೆಳೆಯಲು ಆರಂಭಿಸಿದರು. ಆದರೆ ಅದಕ್ಕೆ ರಾಸಾಯನಿಕಗಳನ್ನು ಹಾಕುವಾಗ ತಲೆಸುತ್ತು ಬರುತ್ತಿದ್ದ ಕಾರಣ ಅವರಿಗೆ ರಾಸಾಯನಿಕ ಬಳಕೆ ಇಷ್ಟವಿರಲಿಲ್ಲ. ಹೀಗಾಗಿಯೇ 2007ರಿಂದ ಅವರು ಸಾವಯವ ಟೀ ಬೆಳೆಯಲು ಆರಂಭಿಸಿದರು. ಮೊದಲು ಹಲವಾರು ಮಸ್ಯೆ ಎದುರಾದರೂ ಎಲ್ಲವನ್ನೂ ಮೆಟ್ಟಿ ನಿಂತರು.
ಟೀ ಬೆಳೆಯುವ 12 ಸಾವಿರ ರೈತರಲ್ಲಿ ತೆನ್ಜೀನ್ ಒಬ್ಬರೇ ಸಾವಯವ ಮಾದರಿಯಲ್ಲಿ ಟೀ ಬೆಳೆಯುವ ಕೃಷಿಕ ಎನಿಸಿಕೊಂಡರು. ಆದರೆ ಈ ಟೀಯನ್ನು ಮಾರಾಟ ಮಾಡುವುದೇ ಅವರಿಗೆ ದೊಡ್ಡ ತಲೆನೋವಾಯಿತು. ಹೀಗಾಗೀ ತಮ್ಮದೇ ಸಣ್ಣ ಪ್ರಾಸೆಸಿಂಗ್ ಯುನಿಟ್ ಆರಂಭಿಸಿ ಟೀ ಪೌಡರ್ ಉತ್ಪಾದನೆ ಮಾಡಲಾರಂಭಿಸಿದರು. ಕೆನಡಾ, ಯುಎಸ್, ಜರ್ಮನ್, ಯುಕೆಗಳಿಗೆ ಮಾರಾಟ ಮಾಡಿದರು. ರಫ್ತು ಹೆಚ್ಚಾಯಿತು.
ಇಂದು ಅವರ ಬಳಿ 75 ಎಕರೆ ಜಾಗವಿದೆ. 7.5 ಎಕರೆಯಲ್ಲಿ ಟೀ ಬೆಳೆಯುತ್ತಾರೆ. ವಾರ್ಷಿಕ 60 ರಿಂದ 75 ಲಕ್ಷ ಗಳಿಸುತ್ತಾರೆ. ಉಳಿದಂತೆ ಹಣ್ಣು ತರಕಾರಿ ಬೆಳೆಯುತ್ತಾರೆ. ಭತ್ತ ಬೆಳೆಯುತ್ತಾರೆ.
ಅರಣ್ಯಕ್ಕೆ ಸಮೀಪದಲ್ಲಿರುವ ತಮ್ಮ ಜಾಗದ ಮರಗಿಡಗಳನ್ನು ಇವರು ಕಡಿದಿಲ್ಲ. ಬದಲಿಗೆ ಅಲ್ಲಿ ಅಪಾರ ಪ್ರಮಾಣದಲ್ಲಿ ಬಿದಿರು ಬೆಳೆದಿದ್ದಾರೆ. ಇದರಿಂದ ಆನೆಗಳಿಗೆ ಆಹಾರ ಸಿಗುತ್ತಿದೆ. ತಮ್ಮ ಜಾಗಕ್ಕೆ ಬೌಂಡರಿಯನ್ನೂ ಹಾಕಿಲ್ಲ. ಆನೆ, ಜಿಂಕೆ, ಹಂದಿ, ನವಿಲು ಸ್ವಚ್ಛಂದವಾಗಿ ಇವರ ತೊಟದಲ್ಲಿ ಓಡಾಡುತ್ತವೆ.
ಇವರಿಂದ ಪ್ರೇರಣೆಗೊಂಡ ಅಸ್ಸಾಂ, ಅರುಣಾಚಲ, ಮೇಘಾಲಯ, ನಾಗಾಲ್ಯಾಂಡ್ಗಳ ರೈತರು ಇಲ್ಲಿಗೆ ಬಂದು ಸಾವಯಕ ಕೃಷಿ ಬಗ್ಗೆ ತಿಳಿದುಕೊಳ್ಳುತ್ತಾರೆ. ಇದುವರೆಗೆ ತೆನ್ಜೀನ್ ಸುಮಾರು 30,000 ಸಾವಿರ ರೈತರಿಗೆ ತರಬೇತಿಯನ್ನೂ ನೀಡಿದ್ದಾರೆ. ಯುಕೆ, ಜಪಾನ್, ಚೀನಾ, ಕೆನಡಾ ಸೇರಿದಂತೆ ಪ್ರಪಂಚದ ಹಲವು ಭಾಗಗಳಿಂದ ದಿನಕ್ಕೆ ಕನಿಷ್ಠ 100 ಪ್ರವಾಸಿಗರು ಇವರ ತೋಟಕ್ಕೆ ಬಂದು ಅದರ ಸೌಂದರ್ಯವನ್ನು ಆಸ್ವಾದಿಸುತ್ತಾರೆ.
‘ಸಾವಯವ ಕೃಷಿ ಪದ್ಧತಿಯಿಂದ ಮಣ್ಣು ಮತ್ತೆ ಪುನರುಜ್ಜೀವಗೊಂಡಿದೆ. ಅದರ ಫಲವತ್ತತೆಯೂ ಹೆಚ್ಚಾಗಿದೆ’ ಎನ್ನುತ್ತಾರೆ ತೆನ್ಜೀನ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.