ಬೆಂಗಳೂರು : ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ನಿರ್ವಾಹಕ ಬಿಎಸ್ಎನ್ಎಲ್ ತನ್ನ ಗ್ರಾಹಕರನ್ನು ಸೆಳೆಯಲು ಮುಂದಾಗಿದ್ದು, ಆಗಸ್ಟ್ 1 ರಿಂದ 15 ರವರೆಗೆ ಬಿಎಸ್ಎನ್ಎಲ್ ಉತ್ಸವ 2017 ನ್ನು ಆಯೋಜಿಸಿದೆ. ಈ ಮೂಲಕ ಕಡಿಮೆ ದರದಲ್ಲಿ ಅತಿ ಹೆಚ್ಚಿನ ಸೌಕರ್ಯಗಳನ್ನು ನೀಡಿ ಗ್ರಾಹಕರನ್ನು ಆಕರ್ಷಿಸಲಿದೆ.
ರಾಜ್ಯದ ಎಲ್ಲಾ ಗ್ರಾಹಕ ಸೇವಾ ಕೇಂದ್ರಗಳಲ್ಲಿ ಈ ಉತ್ಸವ ಪ್ರಾರಂಭವಾಗಿದ್ದು ಆಗಸ್ಟ್ 15 ರ ವರೆಗೆ ಇರಲಿದೆ. ಈ ಸಮಯದಲ್ಲಿ ಬ್ರಾಡ್ಬ್ಯಾಂಡ್, ಲ್ಯಾಂಡ್ಲೈನ್, ಫೈಬರ್ ಸಂಪರ್ಕ ಸೇವೆಗಳ ಹಲವಾರು ಆಫರ್ಗಳು ಲಭ್ಯವಿದೆ.
ಬ್ರಾಡ್ಬ್ಯಾಂಡ್, ಲ್ಯಾಂಡ್ಲೈನ್, ಮೊಬೈಲ್ ಡೇಟಾ ಮತ್ತು ಫೈಬರ್ ಸಂಪರ್ಕದಲ್ಲಿ ವಿಶೇಷ ಆಫರ್ಗಳನ್ನು ಘೋಷಿಸಿಲಾಗಿದೆ. ತಿಂಗಳಿಗೆ 49 ರೂ. ಗೆ ಲ್ಯಾಂಡ್ಲೈನ್, ತಿಂಗಳಿಗೆ 219 ರೂ. ಗೆ ದಿನಕ್ಕೆ 5 ಜಿಬಿ ಹೈಸ್ಪೀಡ್ ಡಾಟಾ ಮತ್ತು ಸ್ಥಳೀಯ ಮತ್ತು ಎಸ್ಟಿಡಿ ಕರೆಗಳು ಸಂಪೂರ್ಣ ಉಚಿತ ಇಂತಹದೊಂದು ವಿನೂತನ ಆಫರ್ ಬಿಡುಗಡೆ ಮಾಡಿದೆ.
ಪ್ರೀಪೇಯ್ಡ್ ಗ್ರಾಹಕರಿಗೆ ಟ್ರಿಪಲ್ ಏಸ್-333 ಇದು 60 ದಿನಗಳ ಅವಧಿಗೆ ದಿನಕ್ಕೆ 3 ಜಿಬಿ ಡಾಟಾ ನೀಡಲಿದೆ. ಚೌಕಾ-444 ಇದು 90 ದಿನಗಳ ಅವಧಿಗೆ ಪ್ರತಿ ದಿನ 4 ಜಿಬಿ ಡಾಟಾ ನೀಡಲಿದೆ. ಸಿಕ್ಸರ್-666 ಇದು 180 ದಿನಗಳ ಅವಧಿಗೆ ಪ್ರತಿದಿನ 2 ಜಿಬಿ ಡಾಟಾ ನೀಡಲಿದ್ದು, ಅನಿಯಮಿತ ಕರೆಗಳನ್ನು ಮಾಡಬಹುದಾಗಿದೆ.
ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಸ್ಥಳೀಯ ಬಿಎಸ್ಎನ್ಎಲ್ ಸೇವಾ ಕೇಂದ್ರಕ್ಕೆ ತೆರಳಿ ಮಾಹಿತಿ ಪಡೆಯಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.