ಶಹಝಾನ್ಪುರ್: ಐವರು ದಲಿತ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿಸಿದ ಅಮಾನುಷ ಘಟನೆ ಉತ್ತರಪ್ರದೇಶದ ಶಝಾನ್ಪುರದ ಹರೆವಾ ಪ್ರದೇಶದಲ್ಲಿ ಸೋಮವಾರ ನಡೆದಿದೆ.
ತಮ್ಮ ಸಮುದಾಯದ ಹುಡುಗಿ ದಲಿತ ಸಮುದಾಯದ ಹುಡಗನೊಂದಿಗೆ ಓಡಿ ಹೋದಳು ಎಂಬ ಕಾರಣಕ್ಕೆ ಕೆಲ ಹಳ್ಳಿಗರು ಈ ಮಹಿಳೆಯರ ವಿರುದ್ಧ ಈ ರೀತಿಯ ಕ್ರೌರ್ಯವನ್ನು ಎಸಗಿದ್ದಾರೆ.
ಹೈವೇ ರಸ್ತೆಯಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಬೆತ್ತಲೆ ಮೆರವಣಿಗೆಗೊಳಿಸಲಾಯಿತು. ಬಳಿಕ ಹಳ್ಳಿಯ ಇತರ ಮಂದಿ ಮಧ್ಯಪ್ರವೇಶ ಮಾಡಿ ಮೆರವಣಿಗೆಯನ್ನು ನಿಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
‘ತಮ್ಮನ್ನು ನಿಂದಿಸಿ, ಚಪ್ಪಳಿಗಳಿಂದ ಹೊಡೆದು, ರಸ್ತೆಯಲ್ಲಿ ಎಳೆದಾಡಿ, ಅವಮಾನಗೊಳಿಸಿ, ನಮ್ಮ ಬಟ್ಟೆಯನ್ನು ಕಳಚಿ ಮೆರವಣಿಗೆ ಮಾಡಿಸಲಾಯಿತು. ಆದರೂ ಪೊಲೀಸರು ಏನೂ ಮಾಡಲಿಲ್ಲ’ ಎಂದು ದೌರ್ಜನ್ಯಕ್ಕೊಳಗಾದ ದಲಿತ ಮಹಿಳೆಯರು ತಮಗಾದ ಅವಮಾನವನ್ನು ವಿವರಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಐವರನ್ನು ಬಂಧಿಸಲಾಗಿದೆ. ಇತರ 15 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.