ಲಕ್ನೋ: ಮಹಿಳೆಯರಿಗೆ ಸುರಕ್ಷಿತ ಪ್ರಯಾಣವನ್ನು ಒದಗಿಸುವ ಸಲುವಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ‘ಪಿಂಕ್’ ಏರ್ಕಂಡೀಷನ್ ಬಸ್ನ್ನು ಆರಂಭಿಸಲು ನಿರ್ಧರಿಸಿದ್ದಾರೆ.
ಯೋಗಿಯ ಈ ಯೋಜನೆಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ಭಯಾ ಫಂಡ್ನಿಂದ 50 ಬಸ್ಗಳಿಗಾಗಿ ಅನುದಾನವನ್ನು ಬಿಡುಗಡೆಗೊಳಿಸಿದೆ.
ಕಂಡೆಕ್ಟರ್ ಸೇರಿದಂತೆ ಈ ಬಸ್ನ ಎಲ್ಲಾ ಸಿಬ್ಬಂದಿ ಮಹಿಳೆಯರಾಗಿರಲಿದ್ದಾರೆ. ಯುಪಿ ರಸ್ತೆ ಸಾರಿಗೆ ಇಲಾಖೆ ಜುಲೈ 21ರಂದು ಈ ಬಗೆಗಿನ ಪ್ರೆಸೆಂಟೇಶನನ್ನು ಸಚಿವಾಲಯದ ಮುಂದಿಟ್ಟಿದ್ದರು.
ಇನ್ನಿತರ ಸರ್ಕಾರಿ ಬಸ್ಗಳಲ್ಲಿ 12,500 ಸಿಸಿಟಿವಿಗಳನ್ನು ಅಳವಡಿಸುವ ಕಾರ್ಯವೂ ಉತ್ತರಪ್ರದೇಶದಲ್ಲಿ ನಡೆಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.