ದೈಹಿಕ ಅಸಮರ್ಥ್ಯತೆ ಇದ್ದರೂ ದಿಟ್ಟವಾಗಿ ಬದುಕಿನ ಸವಾಲುಗಳನ್ನು ಎದುರಿಸುವ ಅದೆಷ್ಟೋ ಜನರ ಸ್ಫೂರ್ತಿದಾಯಕ ಕಥೆಗಳನ್ನು ನಾವು ನೋಡಿರುತ್ತೇವೆ, ಕೇಳಿರುತ್ತೇವೆ. ಕಷ್ಟ ಬಂತೆಂದು ಕೈಚೆಲ್ಲಿ ಬದುಕನ್ನು ಅಂತ್ಯಗೊಳಿಸಲು ನಿರ್ಧರಿಸುವವರಿಗೆ ಇಂತಹ ಕಥೆಗಳು ಪ್ರೇರಣೆ ನೀಡಬಲ್ಲವು.
ಹರಿಯಾಣದ 45 ವರ್ಷದ ಮದನ್ ಲಾಲ್ ಕೈಗಳಿಲ್ಲದೆಯೇ ಹುಟ್ಟಿದವರು. ಆದರೂ ಸುಂದರವಾದ ಬಟ್ಟೆಗಳನ್ನು ಹೊಲಿದು ಅದರ ಮೂಲಕ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಕೈಯಿಲ್ಲ ಎಂಬ ಕಾರಣಕ್ಕೆ ಶಾಲೆಯಲ್ಲೂ ಪ್ರವೇಶ ಸಿಕ್ಕಿಲ್ಲ. ಟೈಲರಿಂಗ್ ತರಬೇತಿಗೂ ಸೇರಿಸಿಕೊಳ್ಳಲಾಗಿಲ್ಲ. ಆದರೆ ಎಂದಿಗೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳದ ಅವರು ಇನ್ನೊಂದು ನಗರಕ್ಕೆ ತೆರಳಿ ಕೇವಲ 15 ದಿನದಲ್ಲೇ ಟೈಲರಿಂಗ್ ಕಲಿತು ತಾನು ಏನೂ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.
ಮೊದಮೊದಲು ಬಟ್ಟೆಗಳನ್ನು ಇವರಿಗೆ ಹೊಲಿಯಲು ನೀಡಲು ಜನ ಹಿಂದೇಟು ಹಾಕಿದರೂ, ಕೊನೆಗೆ ಅವರ ಸಾಮರ್ಥ್ಯ, ಕ್ಷಮತೆಯನ್ನು ನೋಡಿ ಅವರಿಗೆ ಬಟ್ಟೆ ನೀಡಲಾರಂಭಿಸಿದ್ದಾರೆ. ಎಲ್ಲರನ್ನೂ ಅವರು ನಿಬ್ಬೆರಗಾಗುವಂತೆ ಬಟ್ಟೆ ಹೊಲಿಯುವ ಕಲೆಗಾರಿಕೆ ಅವರಲ್ಲಿದೆ.
ಕೈಗಳಿಲ್ಲದ ಇವರಿಗೆ ಕಾಲೇ ಆಸರೆ. ಬಟ್ಟೆ ಹೊಲಿಯುವುದು ಕೂಡ ಇವರು ಕಾಲುಗಳಿಂದಲೇ. ಸ್ನಾನ, ಊಟ, ಬ್ರಶ್ ಮಾಡುವುದು, ಶೇವಿಂಗ್ ಮಾಡುವುದು, ಕೊನೆಗೆ ತನ್ನ ಬೀಡಿಗೆ ಬೆಂಕಿ ಹಚ್ಚುವುದು ಕೂಡ ಇವರು ಕಾಲುಗಳಿಂದಲೇ.
ಅಂಗವೈಕಲ್ಯ ಎಂಬುದು ಯಾವತ್ತೂ ಶಾಪವಲ್ಲ, ಅದನ್ನು ಮಟ್ಟಿ ನಿಂತು ಆತ್ಮವಿಶ್ವಾಸದಿಂದ ಮುನ್ನುಗ್ಗಿದ್ದರೆ ಸಾಮಾನ್ಯ ವ್ಯಕ್ತಿಯಂತೆ ಜೀವನ ಸಾಗಿಸಲು ಸಾಧ್ಯ ಎಂಬುದಕ್ಕೆ ಮದನ್ ಲಾಲ್ ಅವರೇ ಸಾಕ್ಷಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.