ಭುವನೇಶ್ವರದ 42 ವರ್ಷದ ಪ್ರಭಾತ್ ಪ್ರಧಾನ್ ನೋಡಲು ಒಬ್ಬ ಸಾಮಾನ್ಯ ರಿಕ್ಷಾ ಡ್ರೈವರ್ನಂತೆ ಕಾಣುತ್ತಾರೆ. ಆದರೆ ಅಸಾಧಾರಣ ವ್ಯಕ್ತಿತ್ವದ ಇವರು ಬಡವರ ಪಾಲಿನ ಬಂಧು ಎಂದೇ ಗುರುತಿಸಲ್ಪಡುತ್ತಾರೆ. ರಿಕ್ಷಾ ಚಲಾಯಿಸುವ ಇವರು ಅದೇಗೆ ಅಸಹಾಯಕ ಬಂಧು ಆಗುತ್ತಾರೆ ಎಂಬ ಪ್ರಶ್ನೆ ಎಲ್ಲರನ್ನು ಕಾಡಬಹುದು. ಆದರೆ ಬಡವರ, ಅಸಹಾಯಕ ಬಂಧು ಆಗಲು ಕೊಟ್ಯಾಧೀಶ ಆಗಬೇಕು ಎಂದೇನಿಲ್ಲ, ಮಾಡುತ್ತಿರುವ ಕಾಯದಲ್ಲೇ ಅಸಾಯಕರಿಗೆ ಸಹಾಯ ಮಾಡುವವನೇ ನಿಜವಾದ ದೀನ ದಲಿತರ ಬಂಧು ಎನಿಸಿಕೊಳ್ಳುತ್ತಾನೆ.
ಕಳೆದ 20 ವರ್ಷದಲ್ಲಿ ಪ್ರಭಾತ್ ಬರೋಬ್ಬರಿ 7 ಸಾವಿರ ಮಂದಿ ಅಸಾಯಕರನ್ನು ಉಚಿತವಾಗಿ ತಮ್ಮ ಆಟೋದಲ್ಲಿ ಕರೆದೊಯ್ದು ಅವರಿಗೆ ಬೇಕಾದಲ್ಲಿಗೆ ತಲುಪಿಸಿದ್ದಾರೆ. ಇವರ ಸೇವೆಯ ಪ್ರಯೋಜನ ಪಡೆದವರು ವಿಕಲಚೇತನರು, ಅಪಘಾತಕ್ಕೊಳಗಾದವರು, ಹಿರಿಯ ಜೀವಗಳು, ರೋಗಿಗಳು, ಬಡವರು ಆಗಿದ್ದಾರೆ.
ಒಂದು ದಿನ ರಾತ್ರಿ ಪ್ರಭಾತ್ ಬರುವಾಗ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಅಪಘಾತಕ್ಕೀಡಾಗಿದ್ದ, ಆತನ ಸುತ್ತ ಜನ ನೆರಿದಿದ್ದರೂ ಯಾರೊಬ್ಬರು ಸಹಾಯಕ್ಕೆ ಬರಲಿಲ್ಲ. ಬಳಿಕ ಆ ವ್ಯಕ್ತಿ ಅಲ್ಲೇ ಮೃತಪಟ್ಟಿದ್ದ. ಈ ಘಟನೆಯಿಂದ ತೀವ್ರವಾಗಿ ನೊಂದ ಅವರು ಬಳಿಕ ತಾನು ರಿಕ್ಷಾಕೊಂಡು ಕೆಲಸ ಆರಂಭ ಮಾಡಿದಾಗ ತುರ್ತು ಪರಿಸ್ಥತಿಯಲ್ಲಿರುವವರಿಗೆ ಉಚಿತ ಸೇವೆ ಆರಂಭಿಸಿದರು.
ಇವರ ರಿಕ್ಷಾದ ಹಿಂದೆ ಕಾಯಕವೇ ದೇವರು. ವಿಕಲಚೇತನರು, ಹಿರಿಯ ನಾಗರಿಕರು ಮತ್ತು ಅಪಘಾತ ಸಂತ್ರಸ್ಥರು ನನ್ನ ರಿಕ್ಷಾದಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂಬುದಾಗಿ ಬರೆಯಲಾಗಿದೆ. ಇದು ಪ್ರಭಾತ್ ಅವರ ಹೃದಯ ವೈಶಾಲ್ಯತೆಯನ್ನು ತೋರಿಸುತ್ತದೆ.
ಆಟೋ ಚಾಲನೆಯೊಂದೇ ಇವರ ಕುಟುಂಬದ ಆದಾಯದ ಮೂಲ. ಆದರೂ ನಿತ್ಯ ಎರಡರಿಂದ ಮೂರು ಮಂದಿಗೆ ಇವರು ಉಚಿತ ಸೇವೆ ನೀಡುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.