ಲಂಡನ್: ಚೀನಾವನ್ನು ಹಿಂದಿಕ್ಕಿ ಭಾರತ ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಅಗ್ರಗಣ್ಯನಾಗಿ ಹೊರಹೊಮ್ಮಿದೆ, ಮುಂಬರುವ ದಶಕಗಳಲ್ಲೂ ಇದು ತನ್ನ ಮುನ್ನಡೆಯನ್ನು ಕಾಯ್ದುಕೊಳ್ಳಲಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಹೊಸ ಅಧ್ಯಾಯನವೊಂದು ತಿಳಿಸಿದೆ.
ಹಾರ್ವರ್ಡ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ನ ಪ್ರಗತಿ ಪ್ರಕ್ಷೇಪಗಳ ಪ್ರಕಾರ, 2025ರವರೆಗೂ ಭಾರತದ ಅತೀ ವೇಗದ ಆರ್ಥಿಕ ಬೆಳವಣಿಗೆಯ ಮಟ್ಟಿಯಲ್ಲಿ ಟಾಪ್ನಲ್ಲಿರಲಿದೆ. ವಾರ್ಷಿಕ ಶೇ.7.7 ರಷ್ಟು ಪ್ರಗತಿ ಹೊಂದಲಿದೆ.
’ಜಾಗತಿಕ ಆರ್ಥಿಕ ಬೆಳವಣಿಗೆಯ ವೇಗ ಕೆಲ ವರ್ಷಗಳಿಂದ ಚೀನಾದಿಂದ ನೆರೆಯ ಭಾರತಕ್ಕೆ ಸ್ಥಳಾಂತರವಾಗಿದೆ. ಅದು ಮುಂದಿನ ದಶಕಗಳಲ್ಲೂ ಅಲ್ಲೇ ಇರಲಿದೆ’ ಎಂದು ಅಧ್ಯಯನ ಹೇಳಿದೆ.
ಭಾರತ ತನ್ನ ರಫ್ತಿನ ಮೂಲವನ್ನು ಕೆಮಿಕಲ್ಸ್, ವೆಹ್ಹಿಕಲ್ಸ್, ಕೆಲ ಎಲೆಕ್ಟ್ರಾನಿಕ್ಸ್ಗಳಿಗೆ ವಿಸ್ತರಿಸಲು ಇನ್ರೋಡ್ಗಳನ್ನು ಮಾಡಿಕೊಂಡಿದೆ ಎಂದು ಅದು ಅಭಿಪ್ರಾಯಪಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.