ಕೋಲ್ಕತ್ತಾ: ರಾಮ ಮಂದಿರ ನಿರ್ಮಾಣ ಈ ದೇಶದ ಕೋಟ್ಯಾಂತರ ರಾಮ ಭಕ್ತರ ಭಾವನೆಯಾಗಿದೆ, ನ್ಯಾಯಾಲಯದ ಕಾನೂನು ಮೂಲಕವಾಗಲಿ ಅಥವಾ ಒಮ್ಮತದ ಸಮ್ಮತಿಯಿಂದಾಗಲಿ ಅದನ್ನು ನಿರ್ಮಿಸುತ್ತೇವೆ ಎಂದು ಕೇಂದ್ರ ಸಚಿವ ಮಹೇಶ್ ಶರ್ಮಾ ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ಜನಸಂಘ ಸಂಸ್ಥಾಪಕ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿಯವರ ಜನ್ಮದಿನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ನಮ್ಮ ನಿಲುವು ಸ್ಪಷ್ಟವಾಗಿದೆ. ದೇಶದ ಕೋಟ್ಯಾಂತರ ಜನ ರಾಮ ಮಂದಿರ ನಿರ್ಮಾಣ ಬಯಸುತ್ತಿದ್ದಾರೆ’ ಎಂದಿದ್ದಾರೆ.
ಪಶ್ಚಿಮಬಂಗಾಳದಲ್ಲಿ ಇತ್ತೀಚಿಗೆ ನಡೆದ ಕೋಮು ಗಲಭೆಯನ್ನೂ ಅವರು ಈ ಸಂದರ್ಭದಲ್ಲಿ ಖಂಡಿಸಿದರು.
‘ಪಶ್ಚಿಮಬಂಗಾಳ ಭಾರತದ ಶ್ರೇಷ್ಠ ಚಿಂತಕರನ್ನು ಮತ್ತು ನಾಯಕರನ್ನು ತಯಾರಿಸಿದ ರಾಜ್ಯ. ಅದು ದೇಶದ ಮುಂಚೂಣಿ ರಾಜ್ಯವಾಗಬೇಕಿತ್ತು. ಆದರೆ ದುರಾದೃಷ್ಟವಶಾತ್ ಸ್ವಾತಂತ್ರ್ಯ ಬಂದು 70 ವರ್ಷವಾದರೂ ಇತರ ರಾಜ್ಯಗಳಿಗಿಂತ ಹಿಂದುಳಿದಿದೆ’ ಎಂದರು,
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.