ನವದೆಹಲಿ: ಚೀನಾ ಎಷ್ಟೇ ಒತ್ತಡ ಹಾಕಿದರೂ, ಬೆದರಿಕೆ ಸಂದೇಶ ರವಾನಿಸಿದರೂ ಭಾರತ ಮಾತ್ರ ಸಿಕ್ಕಿಂನ ದೋಖ್ ಲಾದಲ್ಲಿ ನಿಯೋಜನೆಗೊಂಡಿರುವ ತನ್ನ ಸೇನೆಯನ್ನೂ ಹಿಂದೆಕ್ಕೆ ಕರೆಸಿಕೊಳ್ಳದೆ ಅಚಲತೆಯನ್ನು ಪ್ರದರ್ಶಿಸಿದೆ.
ದೋಖ್ ಲಾ ಭಾರತ-ಚೀನಾ-ಭೂತಾನ್ ಗಡಿಗಳನ್ನು ಸಂಧಿಸುವ ಸ್ಥಳವಾಗಿದ್ದು, ಸಮುದ್ರ ಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿದೆ. ಇಲ್ಲಿ ಚೀನಾ ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದೆ ಪರಿಸ್ಥಿತಿ ಉದ್ವಿಗ್ನಗೊಳ್ಳಲು ಮುಖ್ಯ ಕಾರಣ.
ಇದೀಗ ಇಲ್ಲಿ ಭಾರತೀಯ ಸೈನಿಕರು ಟೆಂಟ್ಗಳನ್ನು ಹಾಕಿ ಕುಳಿತಿದ್ದಾರೆ. ಈ ಮೂಲಕ ಚೀನಾ ಸೇನೆ ಈ ಪ್ರದೇಶ ತೊರೆಯದ ಹೊರತು ನಾವಿಲ್ಲಿಂದ ಕದಲುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಸೈನಿಕರಿಗೆ ನಿರಂತರವಾಗಿ ಆಹಾರ, ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.