ಸಾಸಿವೆಯಷ್ಟು ಸುಖಕ್ಕಾಗಿ ಸಾವಿರದಷ್ಟು ಪರಿಸರ ನಾಶ ವಾಗುತ್ತಿರುವುದು ಖಂಡನೀಯ : ರವಿಶಂಕರ
ಬಂಟ್ವಾಳ : ಸಾಸಿವೆಯಷ್ಟು ಸುಖಕ್ಕಾಗಿ ಸಾವಿರದಷ್ಟು ಪರಿಸರ ನಾಶವಾಗುತ್ತಿರುವುದು ಖಂಡನೀಯ, ಮನುಷ್ಯರ ದುರಾಸೆಯಿಂದಾಗಿ ನಿರಂತರ ಪರಿಸರ ನಾಶವಾಗುತ್ತಿದೆ, ಪರಿಸರ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ ಎಂದು ಮಂಗಳೂರು ವಿಭಾಗ ಆರ್ ಟಿ ಓ ಶ್ರೀ ರವಿಶಂಕರ್ ರವರು ಅರ್ಕುಳ ಶ್ರೀ ಉಳ್ಳಾಕ್ಲು ಮಗ್ರಂತಾಯಿ ದ್ವಾರ ಸೇವಾ ಸಮಿತಿ ಆಶ್ರಯದಲ್ಲಿ ನಿರ್ಮಾಣ ಹಂತದ ತುಪ್ಪೆಕಲ್ಲು ಹಿಂದೂ ರುದ್ರ ಭೂಮಿಯಲ್ಲಿ ಪರಿಸರ ದಿನದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅರ್ಕುಳ ಶ್ರೀ ಉಳ್ಳಾಕ್ಲು ಮಗ್ರಂತಾಯಿ ಕ್ಷೇತ್ರದ ಧರ್ಮದರ್ಶಿ ಅರ್ಕುಳಬೀಡು ಶ್ರೀ ವಜ್ರನಾಭ ಶೆಟ್ಟಿಯವರು ಬಿಲ್ವ ಪತ್ರೆಯ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು ಆಮೇಲೆ ಮಾತನಾಡಿದ ಶ್ರೀಯುತರು ಹಿಂದಿನವರು ಸ್ವಾರ್ಥ ರಹಿತವಾಗಿ ತನಗಲ್ಲದಿದ್ದರು ಮುಂದಿನ ಜನಾಂಗಕ್ಕೆ ಫಲ ಸಿಗಲೆಂದು ಮರಗಳನ್ನು ಬೆಳೆಸುತ್ತಿದ್ದರು ಆದರೆ ಇಂದು ಶೀಘ್ರ ಫಲ ಕೊಡುವ ದೀರ್ಘ ಬಾಳಿಕೆ ಇಲ್ಲದ ಗಿಡ ನೆಡುವುದು ಖೇದಕರ ಎಂದರು.
ಸದಾನಂದ ಆಳ್ವ ಕಂಪರವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು, ಅರ್ಕುಳ ಬೀಡು ಶ್ರೀ ವಜ್ರನಾಭ ಶೆಟ್ಟಿಯವರು ಅಧ್ಯಕ್ಷತೆ ವಹಿಸಿಕೊಂಡಿದ್ದ ಈ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಪಂಚಾಯತ್ ಸದಸ್ಯ ಸಂತೋಷ್ ತುಪ್ಪೆಕಲ್ಲು, ಅದ್ಯಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಆಶಾ ಪ್ರಕಾಶ್ ,ಪಂಚಾಯತ್ ಸದಸ್ಯೆ ಪವಿತ್ರಅರ್ಕುಳ ಶ್ರೀ ಉಳ್ಳಾಕ್ಲು ಮಗ್ರಂತಾಯಿ ದ್ವಾರ ಸೇವಾ ಸಮಿತಿ ಕಾರ್ಯದರ್ಶಿ ರಘುನಾಥ ಪೂಜಾರಿ , ನವೀನ ಶೆಟ್ಟಿ ತುಪ್ಪೆಕಲ್ಲು ಅಲ್ಲದೆ ದಿನಕರ ಮಂಟಮೆ , ಸಂದೇಶ್ ತುಪ್ಪೆಕಲ್ಲು , ಉಮೇಶ್ ಸೇಮಿತ , ಮತ್ತಿತರರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.
ಹಿಂದೂ ರುದ್ರ ಭೂಮಿ ಸಮಿತಿ ಅರ್ಕುಳ ತುಪ್ಪೆಕಲ್ಲು ಅಧ್ಯಕ್ಷರಾಗಿ ಸದಾನಂದ ಆಳ್ವ ಅರ್ಕುಳ ಕಂಪ , ಉಪಾಧ್ಯಕ್ಷರಾಗಿ ಜಯರಾಜ ಕರ್ಕೇರ ಮಂಟಮೆ , ರಘುನಾಥ್ ಪೂಜಾರಿ ತುಪ್ಪೆಕಲ್ಲು , ಕಾರ್ಯದರ್ಶಿ ಸಂದೇಶ್ ತುಪ್ಪೆಕಲ್ಲು , ಜೊತೆ ಕಾರ್ಯದರ್ಶಿಗಳಾಗಿ ಎ. ರಮೇಶ್ ಸಪಲಿಗ ತುಪ್ಪೆಕ್ಕಲ್ಲು , ನವೀನ್ ಶೆಟ್ಟಿ ತುಪ್ಪೆಕಲ್ಲು , ಖಜಾಂಚಿ ರಾಜೇಶ್ ತುಪ್ಪೆಕಲ್ಲು ಹಾಗು 16 ಜನ ಗ್ರಾಮಸ್ಥರ ಸಮಿತಿ ರಚನೆಯಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.