ನವದೆಹಲಿ : ಭಾರತೀಯ ರೈಲ್ವೆಯು ತನ್ನ ನೇಮಕಾತಿ ಪ್ರಕ್ರಿಯೆಯಲ್ಲಿ ವಿವಿಧ ಭಾಷೆಗಳ ಪ್ರಶ್ನೋತ್ತರ ಬುಕ್ಲೆಟ್ ಬದಲಿಗೆ ಆನ್ಲೈನ್ ಪರೀಕ್ಷೆಗಳನ್ನು ನಡೆಸಿದೆ. ಇದರ ಫಲವಾಗಿ 4 ಲಕ್ಷ ಮರಗಳು ಬದುಕುಳಿದಿವೆ ಮತ್ತು 319 ಕೋಟಿ ಪೇಪರ್ ಶೀಟ್ಗಳ ಉಳಿತಾಯವಾಗಿವೆ.
3 ಹಂತದಲ್ಲಿ ಆನ್ಲೈನ್ ಪರೀಕ್ಷೆಯನ್ನು ನಡೆಸಲಾಗಿದ್ದು, ಪ್ರಾಥಮಿಕ, ಲಿಖಿತ ಪರೀಕ್ಷೆ, ಯೋಗ್ಯತಾ ಪರೀಕ್ಷೆ ಮತ್ತು ಟೈಪಿಂಗ್ ಸ್ಕಿಲ್ಗಳನ್ನು ಇದು ಒಳಗೊಂಡಿದೆ.
ಪರೀಕ್ಷೆಯಲ್ಲಿ ನಕಲು ನಡೆಯುವುದನ್ನು ತಪ್ಪಿಸುವ ಸಲುವಾಗಿ ರೈಲ್ವೆಯು ತನ್ನ 351 ಕೇಂದ್ರಗಳಲ್ಲಿ ಜಗತ್ತಿನ ಅತಿ ದೊಡ್ಡ ಆನ್ಲೈನ್ ಪರೀಕ್ಷೆಯನ್ನು ನಡೆಸಿದೆ. ಇದರಲ್ಲಿ 92 ಲಕ್ಷ ಅಭ್ಯರ್ಥಿಗಳು ಪಾಲ್ಗೊಂಡಿದ್ದಾರೆ.
ರೈಲ್ವೆಯ ವಿವಿಧ ವಲಯಗಳಲ್ಲಿ ಸುಮಾರು 14 ಸಾವಿರ ಖಾಲಿ ಹುದ್ದೆಗಳಿವೆ.
92 ಲಕ್ಷ ಅಭ್ಯರ್ಥಿಗಳ ಪೈಕಿ 2.73 ಲಕ್ಷ ಪ್ರಾಥಮಿಕ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ. ಇವರನ್ನು ಲಿಖಿತ ಪರೀಕ್ಷೆಗೆ ಅರ್ಹಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.