ನವದೆಹಲಿ : ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಅವರು ಡಿಡಿ ನ್ಯೂಸ್ನ ಹೊಸ ವೆಬ್ಸೈಟ್ www.ddnews.gov.in. ಗೆ ಚಾಲನೆ ನೀಡಿದ್ದಾರೆ.
ಈ ವೇಳೆ ಕೇಂದ್ರ ಸಚಿವರಾದ ರಾಜ್ಯವರ್ಧನ್ ರಾಥೋಡ್, ಮಾಹಿತಿ ಮತ್ತು ಪ್ರಚಾರ ಕಾರ್ಯದರ್ಶಿ ಎನ್.ಕೆ. ಸಿನ್ಹಾ, ಪ್ರಸಾರ ಭಾರತಿ ಮುಖ್ಯಸ್ಥ ಸೂರ್ಯಪ್ರಕಾಶ್, ಸಿಇಒ ಶಶಿಶೇಖರ್ ವೆಂಪತಿ ಉಪಸ್ಥಿತರಿದ್ದರು.
ಈ ಡಿಡಿ ನ್ಯೂಸ್ ವೆಬ್ಸೈಟ್ ಜಗತ್ತಿನ ಸುದ್ದಿ ಮತ್ತು ಇತರ ಮಾಹಿತಿಗಳ ಒಳನೋಟವನ್ನು ನೀಡಲಿದೆ. ಹಿಂದಿ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲೂ ಸುದ್ದಿಗಳನ್ನು ನೀಡಲಿದೆ. ಅಲ್ಲದೆ ಡಿಡಿ ನ್ಯೂಸ್ನ ಸುದ್ದಿಗಳು ಲೈವ್ ವೆಬ್ಕಾಸ್ಟ್ ಆಗಲಿದೆ.
ಈ ವೇಳೆ ಮಾತನಾಡಿದ ಸಚಿವ ವೆಂಕಯ್ಯ ನಾಯ್ಡು ಅವರು, ಸುದ್ದಿಗಳ ನಿಖರತೆಯನ್ನು ವೃದ್ಧಿಸುವ ಅಗತ್ಯತೆ ಇದೆ ಎಂದು ಸಾರಿದರು.
ಈ ವೆಬ್ಸೈಟ್ನಲ್ಲಿ ಉನ್ನತ ಬಣ್ಣ ಸಂಯೋಜನೆಯಿದ್ದು, ಓಪನ್ ಸೋರ್ಸ್ ಟೆಕ್ನಾಲಜಿಯನ್ನು ಇದರಲ್ಲಿ ಅಳವಡಿಸಲಾಗಿದೆ.
ಇದನ್ನು ನಾವು ಮೊಬೈಲ್ ಫೋನ್ನಲ್ಲಿ ನೋಡಿದಾಗ ತಮ್ಮ ಸ್ಕ್ರೀನ್ ಸೈಜ್ಗೆ ಅನುಗುಣವಾಗಿ ಇದು ಹೊಂದಿಕೊಳ್ಳುತ್ತದೆ. ಹೀಗಾಗಿ ನಾವು ಈ ವೆಬ್ಸೈಟ್ನ್ನು ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ಗಳಲ್ಲಿ ಅತ್ಯಂತ ಸುಲಭವಾಗಿ ಓದಬಹುದಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.