ಐಎಎಸ್ ಆರ್ಮ್ಸ್ಟ್ರಾಂಗ್ ಪೆಮೆ ಮಣಿಪುರದ ‘ಮಿರಾಕಲ್ ಮ್ಯಾನ್’ ಎಂದೇ ಖ್ಯಾತರು. ಜಿಲ್ಲಾಧಿಕಾರಿಯಾಗಿರುವ ಇವರು ಸರ್ಕಾರದ ನಯಾಪೈಸೆ ಅನುದಾನವಿಲ್ಲದೆ 100ಕಿಮೀ ರಸ್ತೆಯನ್ನು ನಿರ್ಮಿಸಿ ಎಲ್ಲರ ನೆಬ್ಬೆರಗಾಗುವಂತೆ ಮಾಡಿದ್ದ ಇವರು, ಇದೀಗ ಪ್ರತಿ ಶುಕ್ರವಾರ ಶಾಲಾ ವಿದ್ಯಾರ್ಥಿಗಳನ್ನು ತನ್ನೊಂದಿಗೆ ಭೋಜನದಲ್ಲಿ ಭಾಗಿಯಾಗಲು ಆಹ್ವಾನಿಸುತ್ತಿದ್ದಾರೆ.
ತನ್ನ ಫೇಸ್ಬುಕ್ ಪೇಜ್ ಮೂಲಕ 40 ಲಕ್ಷ ಹಣ ಸಂಗ್ರಹ ಮಾಡಿ ಮಣಿಪುರವನ್ನು ನಾಗಾಲ್ಯಾಂಡ್ ಮತ್ತು ಅಸ್ಸಾಂಗೆ ಸಂಪರ್ಕಿಸುವ 100 ಮೀ ರಸ್ತೆಯನ್ನು ನಿರ್ಮಿಸುವ ಮೂಲಕ ಈಶಾನ್ಯ ಭಾಗದ ನೆಚ್ಚಿನ ಐಎಎಸ್ ಅಧಿಕಾರಿಯಾದ ಪೆಮೆ, ಇದೀಗ ಮತ್ತೊಂದು ಅಭಿಯಾನದ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ.
ಈ ಬಾರಿ ಅವರು 5 ಮತ್ತು 10ನೇ ತರಗತಿಯ ಮಕ್ಕಳನ್ನು ಪ್ರತಿ ಶುಕ್ರವಾರ ತನ್ನ ನಿವಾಸಕ್ಕೆ ಬಂದು ತನ್ನೊಂದಿಗೆ ಭೋಜನ ಮಾಡುವಂತೆ ಆಹ್ವಾನಿಸಿದ್ದಾರೆ. ಕನಸು, ಆಕಾಂಕ್ಷೆಗಳನ್ನು ಹಂಚಿಕೊಳ್ಳಲು ಮತ್ತು ಭವಿಷ್ಯದಲ್ಲಿ ಎಂತಹ ಮಣಿಪುರವನ್ನು ನೋಡಲು ಅವರು ಬಯಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಈ ಕಾರ್ಯಕ್ರಮ ಆರಂಭಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಈ ಒಂದು ವಿಭಿನ್ನ ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳಿಗೂ ಭಾಗಿಯಾಗಲು ಅವಕಾಶ ಮಾಡಿಕೊಡುವ ಸಲುವಾಗಿ ಒಂದೊಂದೇ ಶಾಲೆಗಳನ್ನು ಒಂದೊಂದು ಶುಕ್ರವಾರದ ಭೋಜನಕ್ಕೆ ಆಯ್ಕೆ ಮಾಡಲಾಗುತ್ತದೆ.
‘ಬಾಲ್ಯದಲ್ಲಿ ಜಿಲ್ಲಾಧಿಕಾರಿಯನ್ನು ನೋಡಲೆಂದು ಪದೇ ಪದೇ ಅವರ ಕಛೇರಿಯತ್ತ ಧಾವಿಸುತ್ತಿದೆ. ಆದರೆ ಅವರನ್ನು ನೋಡಲು ಸಾಧ್ಯವಾಗುತ್ತಿಲ್ಲ. ಇದೀಗ ನಾನೇ ಜಿಲ್ಲಾಧಿಕಾರಿಯಾಗಿರುವುದರಿಂದ ಮಕ್ಕಳಿಗೆ ನನ್ನೊಂದಿಗೆ ಊಟ ಮಾಡುವ ಅವಕಾಶ ಕೊಡುತ್ತಿದ್ದೇನೆ. ಈ ಮೂಲಕ ಅವರ ಕನಸಿಗೆ ಸ್ಫೂರ್ತಿ ತುಂಬಲು ಬಯಸುತ್ತೇನೆ’ ಎಂದು ಪಮೆ ಹೇಳುತ್ತಾರೆ.
ಅಧಿಕಾರಿಯಾಗಿ ಪಮೆ ನಿಜಕ್ಕೂ ಜನರ ಚಾಂಪಿಯನ್ ಆಗಿದ್ದರೆ, ಒರ್ವ ವ್ಯಕ್ತಿಯಾಗಿ ಜನರ ಪ್ರೀತಿಗೂ ಪಾತ್ರರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.