ಭುವನೇಶ್ವರ್: ಏಷ್ಯನ್ ಅಥ್ಲೇಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತ ಶುಭಾರಂಭ ಮಾಡಿದ್ದು, ಒಟ್ಟು 7 ಪದಕಗಳನ್ನು ಗೆದ್ದುಕೊಂಡಿದ್ದಾರೆ. ಶಾಟ್ ಪುಟ್ಟರ್ ಮನ್ಪ್ರೀತ್ ಕೌರ್ ಮತ್ತು ಲಾಂಗ್ ಡಿಸ್ಟನ್ಸ್ ರನ್ನರ್ ಜಿ.ಲಕ್ಷ್ಮಣನ್ ಚಿನ್ನದ ಪದಕ ಗೆದ್ದಿದ್ದಾರೆ.
ಮಹಿಳಾ ಲಾಂಗ್ ಜಂಪ್ನಲ್ಲಿ ವಿ.ನೀನ ಮತ್ತು ನಯನ ಜೇಮ್ಸ್ ಬೆಳ್ಳಿ ಪದಕ ಗೆದ್ದಿದ್ದಾರೆ. ಡಿಸ್ಕಸ್ ಥ್ರೋನಲ್ಲಿ ವಿಕಾಸ್ ಗೌಡ, ಮಹಿಳಾ 5 ಸಾವಿರ ಮೀಟರ್ ಓಟದಲ್ಲಿ ಸಂಜೀವಿನಿ ಯಾದವ್, ಈಟಿ ಎಸೆತದಲ್ಲಿ ಅನ್ನು ರಾನಿ ಕಂಚಿನ ಪದಕ ಜಯಿಸಿದ್ದಾನೆ.
ಕ್ರೀಡೆಯಲ್ಲಿ ಹೆಚ್ಚು ಶಕ್ತಿಶಾಲಿಯಾಗಿರುವ ಚೀನಾ ಮೊದಲ ದಿನ ಒಂದು ಚಿನ್ನ ಮತ್ತು 2 ಬೆಳ್ಳಿ ಜಯಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.