ಜಮೈಕಾ: ಟೀಂ ಇಂಡಿಯಾದ ಭರವಸೆಯ ಕ್ರಿಕೆಟಿಗ, ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿದ್ದ ದಾಖಲೆಯೊಂದನ್ನು ಮುರಿದಿದ್ದು, ಏಕದಿನ ಪಂದ್ಯದ ಯಶಸ್ವಿ ಚೇಸಿಂಗ್ಗಳಲ್ಲಿ ಅತೀ ಹೆಚ್ಚಿನ ಸೆಂಚುರಿ ಬಾರಿಸಿದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದ ಮೂಲಕ ತಮ್ಮ 28ನೇ ಏಕದಿನ ಆಡಿದ ವಿರಾಟ್ ಕೊಹ್ಲಿ ಶತಕ ಬಾರಿಸಿದರು. ಭಾರತವನ್ನು ಜಯದತ್ತ ಕೊಂಡೊಯ್ಯದರು.
ಇದು ಕೊಹ್ಲಿಯ 18ನೇ ಶತಕವಾಗಿದ್ದು, ಇದು 17 ಸೆಂಚುರಿ ಬಾರಿಸಿದ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದೆ.
18 ಶತಕವನ್ನು ಪೂರೈಸಲು ಕೊಹ್ಲಿ 102ಇನ್ನಿಂಗ್ಸ್ಗಳನ್ನು ಪಡೆದರೆ, ತೆಂಡೂಲ್ಕರ್ 17 ಸೆಂಚುರಿ ಹೊಡೆಯಲು 232 ಇನ್ನಿಂಗ್ಸ್ ಪಡೆದಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.