ಸಿಯೋಲ್: ದಕ್ಷಿಣಕೊರಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಲ್ಲಿನ ಅಧ್ಯಕ್ಷೆ ಪಾರ್ಕ್ ಗ್ಯುನ್ ಹೆ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಅಲ್ಲಿನ ಭಾರತೀಯ ಸಮುದಾಯ ಏರ್ಪಡಿಸಿದ ಔತನಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು ‘ಕಳೆದ ಒಂದು ವರ್ಷದಿಂದ ಭಾರತವನ್ನು ನೋಡುವ ವಿಶ್ವದ ದೃಷ್ಟಿಕೋನ ಬದಲಾಗಿದೆ. ಜನ ಭಾರತಕ್ಕೆ ಭೇಟಿ ನೀಡಲು ಬರುತ್ತಾರೆ. ಜನರೇ ಒಂದು ದೇಶವನ್ನು ಕಟ್ಟುತ್ತಾರೆ’ ಎಂದರು.
ಇಂದು ಮೋದಿ ದಕ್ಷಿಣಕೊರಿಯಾದೊಂದಿಗೆ ಮಹತ್ವದ 7 ಒಪ್ಪಂದಗಳಿಗೆ ಸಹಿ ಹಾಕಿದರು. ಭಾರತ ಮೂಲಸೌಕರ್ಯ ಅಭಿವೃದ್ಧಿಗೆ, ಸ್ಮಾರ್ಟ್ ಸಿಟಿ ಅಭಿವೃದ್ಧಿಗೆ, ರೈಲ್ವೇ, ಪವರ್ ಜನರೇಶನ್ ಮುಂತಾದ ಕಾರ್ಯಕ್ಕೆ ಕೊರಿಯಾ 10 ಬಿಲಿಯನ್ ಯುಎಸ್ ಡಾಲರ್ ನೆರವು ನೀಡಲಿದೆ.
ಸಹಿ ಹಾಕಿದ ಬಳಿಕ ಮಾತನಾಡಿದ ಮೋದಿ ‘ಭಾರತದ ಆರ್ಥಿಕತೆಯಲ್ಲಿ ದಕ್ಷಿಣಕೊರಿಯಾ ಪ್ರಮುಖ ಪಾಲುದಾರ, ನನ್ನ ಆಡಳಿತದ ಮೊದಲ ವರ್ಷದಲ್ಲೇ ಇಲ್ಲಿ ಆಗಮಿಸಿರುವುದಕ್ಕೆ ನಾನು ಸಂತಸ ಪಡುತ್ತಿದ್ದೇನೆ, ನಿಮ್ಮ ಹೃತ್ಪೂರ್ವಕ ಸ್ವಾಗತಕ್ಕೆ ಚಿರಋಣಿಯಾಗಿದ್ದೇನೆ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.