ಭಾರತ ನಿಧಾನಕ್ಕೆ ಲಿಂಗ ತಾರತಮ್ಯವನ್ನು ಮೀರಿ ಬೆಳೆಯುತ್ತಿದೆ ಎಂಬುದನ್ನು ಈ ದೇಶದ ಮಹಿಳೆಯರು ಹೆಚ್ಚು ಕಮ್ಮಿ ಎಲ್ಲಾ ವಲಯದಲ್ಲೂ ಸಾಬೀತುಪಡಿಸಿ ತೀರಿಸುತ್ತಿದ್ದಾರೆ. ರಾಜಕೀಯವಿರಲಿ, ಪೊಲೀಸ್ ಪಡೆಯಿರಲಿ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ತೋರಿಸಿಕೊಡುತ್ತಿದ್ದಾರೆ.
ಕಾಮನ್ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್(ಸಿಎಚ್ಆರ್ಐ) ಪ್ರಕಾರ ಭಾರತ ಸ್ವಾತಂತ್ರ್ಯ ಪಡೆದು 70 ವರ್ಷವಾದರೂ ಪೊಲೀಸ್ ಪಡೆಯಲ್ಲಿ ಕೇವಲ ಶೇ.6.11ರಷ್ಟು ಮಹಿಳೆಯರಿದ್ದಾರೆ. ಆದರೆ ಈ ಅತೀ ಕಡಿಮೆ ಸಂಖ್ಯೆಯ ಮಹಿಳೆಯರು ತಾವು ಏನು, ತಮ್ಮ ಶಕ್ತಿ ಎಂಥದ್ದು ಎಂಬುದನ್ನು ತೋರಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಪುರುಷ ಪ್ರಧಾನ ವ್ಯವಸ್ಥೆಯೊಂದಿಗೆ ಹೋರಾಡಿ ಗೆದ್ದಿದ್ದಾರೆ.
ದೇಶದ ಮಹಿಳಾ ಪೊಲೀಸರ ಬಗ್ಗೆ ಹೇಳುವಾಗ ತಟ್ಟನೆ ನಮ್ಮ ಮುಂದೆ ಬರುವುದು ಕಿರಣ್ ಬೇಡಿ. ಆಕೆಯ ದೈರ್ಯ, ಸಹಾಸ, ಶೌರ್ಯಕ್ಕೆ ಇಡೀ ದೇಶವೇ ಹೆಮ್ಮೆಪಡುತ್ತಿದೆ. ಒರ್ವ ಮಹಿಳೆ ಎಷ್ಟು ಶಕ್ತಿವಂತೆಯಾಗಿರುತ್ತಾಳೆ ಎಂಬುದನ್ನು ಆಕೆ ತೋರಿಸಿಕೊಟ್ಟಿದ್ದಾರೆ. ಅವರ ಬಳಿಕ ಇದೀಗ 8 ಮಹಿಳಾ ಐಪಿಎಸ್ ಅಧಿಕಾರಿಗಳು ದೇಶವನ್ನು ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ.
ಅಪರಜಿತ ರಾಯ್: 28 ವರ್ಷದ ಇವರು ಗೋರ್ಖ ಸಮುದಾಯದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ. ಗೋರ್ಖಲ್ಯಾಂಡ್ ಪ್ರತಿಭಟನೆಯನ್ನು ನಿಯಂತ್ರಿಸಲು ಇವರನ್ನು ಡಾರ್ಜಿಲಿಂಗ್ಗೆ ವರ್ಗಾಯಿಸಲು ಚಿಂತಿಸಲಾಗಿದೆ.
ಸಂಗೀತ ಕಾಲಿಯಾ: ಒರ್ವ ಪೇಂಟರ್ನ ಮಗಳು. ಟಿವಿ ಸಿರಿಯಲ್ನಿಂದ ಪ್ರೇರಿತಗೊಂಡು ಐಪಿಎಸ್ ಆದಾಕೆ.
ಸಂಜುಕ್ತ ಪರಶರ್: 16 ಬೋಡೋ ಉಗ್ರರನ್ನು ಬಂಧಿಸಿ, ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಕೀತೀ ಇವರದ್ದು. ಭೋಪಾಲ್-ಉಜ್ಜೈನಿ ರೈಲು ಸ್ಫೋಟದ ತನಿಖೆ ನಡೆಸುತ್ತಿದ್ದಾರೆ.
ಮೀರಾ ಬೋರ್ವಂಕರ್: 2001ರಲ್ಲಿ ಮುಂಬಯಿ ಕ್ರೈಂ ಬ್ರಾಂಚ್ ನೇತೃತ್ವ ವಹಿಸಿದ್ದರು. ಈ ಸಾಧನೆ ಮಾಡಿದ ಮೊದಲ ಮಹಿಳೆ. ಯಾಕೂಬ್ ಮೆಮೊನ್ ಗಲ್ಲಿಗೆ ಸಾಕ್ಷಿಯಾದವರು.
ರುವೇದ ಸಲಂ: ಕಾಶ್ಮೀರದ ಮೊದಲ ಯಪಿಎಸ್ ಅಧಿಕಾರಿ. ತಮಿಳುನಾಡಿನಲ್ಲಿ ಜಂಟಿ ಪೊಲೀಸ್ ಆಯುಕ್ತೆಯಾಗಿದ್ದಾರೆ.
ಮೆರಿನ್ ಜೋಸೆಫ್: ಕೇರಳ ಕೇಡರ್ನ ಮೂರನೇ ಮಲಯಾಳಿ ಮಹಿಳಾ ಐಪಿಎಸ್. ತಮ್ಮ ಸಾಮಾಜಿಕ ಕಳಕಳಿಗಾಗಿ ಇವರು ಹೆಸರಾದವರು.
ಸೋನಿಯಾ ನಾರಂಗ್: ಕರ್ನಾಟಕದಲ್ಲಿ ಉಪ ಆಯುಕ್ತೆಯಾದ ಎರಡನೇ ಮಹಿಳಾ ಐಪಿಎಸ್. ದಿಟ್ಟ ಕ್ರಮಕ್ಕಾಗಿ ಹೆಸರಾದವರು. ಪ್ರತಿಭಟನೆಯ ವೇಳೆ ಉದ್ಧಟತನ ತೋರಿದ ಶಾಸಕನಿಗೆಯೇ ಕಪಾಳಮೋಕ್ಷ ಮಾಡಿ ಜೈಲಿನೊಳಕ್ಕೆ ಅಟ್ಟಿದವರು.
ಸೌಮ್ಯ ಸಾಂಬಸಿವನ್: ಹಿಮಾಚಲ ಪ್ರದೇಶದ ಶರ್ಮೆರಾದಲ್ಲಿ ಪೊಲೀಸ್ ಸುಪರೀಟೆಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾದಕದ್ರವ್ಯ ಜಾಲವನ್ನು ಬೇಧಿಸಿದ ಕೀರ್ತಿ ಇವರದ್ದು.
ಉತ್ತಮ ಕಾರ್ಯ, ಚಾಣಾಕ್ಷ ನಡೆಯ ಮೂಲಕ ಈ ಮಹಿಳಾ ಪೊಲೀಸ್ ಅಧಿಕಾರಿಗಳು ಭಾರತವನ್ನು ಅಪರಾಧ ಮುಕ್ತಗೊಳಿಸಲು ತಮ್ಮದೇ ಆದ ದಾಟಿಯಲ್ಲಿ ಕಾರ್ಯ ಮಾಡುತ್ತಿದ್ದಾರೆ. ಇವರ ದಿಟ್ಟತನಕ್ಕೊಂದು ನಮ್ಮ ನಮನ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.