ನಗರೀಕರಣ ಮತ್ತು ಅಭಿವೃದ್ಧಿ ಪ್ರಸ್ತುತ ಕಾಲಘಟ್ಟದ ಅನಿವಾರ್ಯತೆ. ಜನಸಂಖ್ಯೆ ಏರುತ್ತಿದ್ದಂತೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತದೆ. ಇವುಗಳ ನಿರ್ವಹಣೆ ಮಾಡಲು ರಸ್ತೆಗಳನ್ನು ಅಗಲಗೊಳಿಸಬೇಕಾಗುತ್ತದೆ. ರಸ್ತೆಗಳ ಅಗಲೀಕರಣಕ್ಕೆ ಮರಗಳ ಮಾರಣಹೋಮ ಅನಿವಾರ್ಯ ಎಂಬಂತಾಗಿದೆ.
ಆದರೆ ಬುದ್ಧಿಜೀವಿ ಮನುಷ್ಯ ಮರಗಳನ್ನು ಕಡಿದು ಕೊಲ್ಲುವ ಬದಲು ಅವುಗಳನ್ನು ಬೇರು ಸಮೇತ ಕಿತ್ತು ಬೇರೆಡೆ ನೆಟ್ಟು ಬದುಕಿಸಿಕೊಳ್ಳಬಹುದು ಎಂಬ ಜ್ಞಾನವನ್ನು ಅರಿತುಕೊಂಡಿದ್ದಾನೆ. ಆದರೆ ಖರ್ಚು ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಈ ರೀತಿ ಮಾಡಲು ಯಾರು ಹೋಗುವುದೇ ಇಲ್ಲ.
ಹೈದರಾಬಾದಿನ ರಾಮಚಂದ್ರ ಅಪ್ಪರಿ ತನ್ನ ಸುತ್ತಮುತ್ತಲ ಪ್ರದೇಶದಲ್ಲಿ ಮರಗಳ ಮಾರಣಹೋಮವಾಗುತ್ತಿರುವುದನ್ನು ನೊಡಲಾಗದೆ ಅವುಗಳನ್ನು ಕಿತ್ತು ಬೇರೆಡೆ ನೆಡುವ ಕಾರ್ಯ ಆರಂಭಿಸಿದ್ದಾರೆ. ಇದುವರೆಗೆ ರಾಮಚಂದ್ರ ಅವರು 5 ಸಾವಿರ ಮರಗಳನ್ನು ಬೇರೆಡೆ ನೆಟ್ಟು ಅದನ್ನು ಬದುಕಿಸಿಕೊಂಡಿದ್ದಾರೆ.
ಕ್ರೇನ್ ಸಹಾಯದಿಂದ ಬೇರಿಗೆ ತುಸುವೂ ಹಾನಿಯಾಗದಂತೆ ಮರವನ್ನು ಕಿತ್ತು ಬಳಿಕ ಬೇರನ್ನು ಜೂಟ್ ಬ್ಯಾಗ್ ಮೂಲಕ ಪ್ಯಾಕ್ ರೀತಿ ಮಾಡಿ ಬೇರೆಡೆ ಸಾಗಿಸಲಾಗುತ್ತದೆ. ನಂತರ ಅದನ್ನು ಇನ್ನೊಂದೆಡೆ ನೆಟ್ಟು ಪೋಷಣೆ ಮಾಡಲಾಗುತ್ತದೆ.
ಕೆಲವೊಂದು ಮರಗಳ ಮರು ನೆಡುವಿಕೆಗೆ ೬ ಸಾವಿರದವರೆ ಖರ್ಚಾದರೆ, ದೊಡ್ಡ ದೊಡ್ಡ ಮರಗಳನ್ನು ಕಿತ್ತು ನೆಡಲು ೧ ಲಕ್ಷಕ್ಕೂ ಅಧಿಕ ಖರ್ಚಾಗಿದೆ. ಆದರೆ ಶುದ್ಧವಾದ ಗಾಳಿ, ಪ್ರಕೃತಿ ಬೇಕಾದರೆ ಇಷ್ಟು ಖರ್ಚು ಮಾಡುವುದು ಅನಿವಾರ್ಯ ಎನ್ನುತ್ತಾರೆ ರಾಮಚಂದ್ರ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.