ನವದೆಹಲಿ : ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಲು ನಾವು ಬಹಳ ಉತ್ಸುಕರಾಗಿದ್ದೇವೆ ಎಂದು ಅಮೇರಿಕಾದ ಆನ್ಲೈನ್ ರಿಟೈಲ್ ದೈತ್ಯ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಹೇಳಿದ್ದಾರೆ. ಭಾರತದಲ್ಲಿ 500 ಕೋಟಿ ಡಾಲರ್ ಬಂಡವಾಳ ಹೂಡಿಕೆ ಮಾಡುವ ಭರವಸೆಯನ್ನು ಅಮೆಜಾನ್ ನೀಡಿದೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ಬಳಿಕ ಟ್ವೀಟ್ ಮಾಡಿರುವ ಜೆಫ್ ಬೆಜೋಸ್, ‘ನರೇಂದ್ರ ಮೋದಿಯವರ ಭೇಟಿ ಅತ್ಯದ್ಭುತವಾಗಿತ್ತು. ಅವರ ಮಾತುಗಳು ಪ್ರಭಾವಶಾಲಿಯಾಗಿದ್ದವು. ಆಶಾವಾದದಿಂದ ಭಾರತದಲ್ಲಿ ಸಕಾರಾತ್ಮಕ ಭಾವನೆಗಳೊಂದಿಗೆ ಅಲ್ಲಿ ಹೂಡಿಕೆ ಮುಂದುವರೆಸುತ್ತಾ ನಾವೂ ಬೆಳೆಯುತ್ತೇವೆ’ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿಯವರು ಅಮೇರಿಕದ 20 ಮಂದಿ ಪ್ರಭಾವಿ ಉದ್ಯಮಿಗಳ ಜೊತೆ ಸಂವಾದ ನಡೆಸಿದ್ದರು. ಗೂಗಲ್ನ ಸುಂದರ್ ಪಿಚೈ, ಆಡೋಬ್ನ ಶಂತನು ನಾರಾಯಣ್, ಆ್ಯಪಲ್ನ ಸಿಇಒ ಟಿಮ್ ಕುಕ್, ಮಾಸ್ಟರ್ ಕಾರ್ಡ್ಸ್ನ ಅಜಯ್ ಬಂಗಾ ಅವರೊಂದಿಗೆ ಅಮೆಜಾನ್ನ ಜೆಫ್ ಕೂಡಾ ಒಬ್ಬರು.
ಅಮೇಜಾನ್ ಭಾರತದಲ್ಲಿ 4 ವರ್ಷಗಳಲ್ಲಿ ಪೂರೈಸಿದ್ದು, ದೇಶೀಯ ಇ-ಮಾರುಕಟ್ಟೆಗೆ ತೀವ್ರ ಸ್ಪರ್ಧೆಯೊಡ್ಡುತ್ತಿದೆ. ಗ್ರಾಹಕರಿಗೆ ತ್ವರಿತವಾಗಿ ಸೇವೆ ನೀಡುತ್ತಾ, ಯಥೇಚ್ಛವಾಗಿ ಆಕ್ರಮಣಕಾರಿ ರೂಪದಲ್ಲಿ ಬಂಡವಾಳವನ್ನು ಹೂಡಿಕೆ ಮಾಡುತ್ತಾ ದೇಶಾದ್ಯಂತ 13 ರಾಜ್ಯಗಳಲ್ಲಿ 41 ದಾಸ್ತಾನು ಮಳಿಗೆಯನ್ನು ಹೊಂದಿದೆ.
ನಮ್ಮ ಭಾರತ ತಂಡವು ಗ್ರಾಹಕರಿಗೆ ಮತ್ತು ಮಾರಾಟಗಾರರಿಗೆ ತ್ವರಿತವಾಗಿ ವಿತರಣೆ ಮಾಡುತ್ತಿದೆ. ತಂತ್ರಜ್ಞಾನ ಮತ್ತು ಮೂಲಭೂತ ಸೌಕರ್ಯದಲ್ಲಿ ನಾವು ಹೂಡಿಕೆ ಮಾಡುತ್ತೇವೆ. ಭಾರತದಲ್ಲಿ 500 ಕೋಟಿ ಡಾಲರ್ ಬಂಡವಾಳ ಹೂಡಿಕೆಯನ್ನು ಮಾಡುವ ಮೂಲಕ ನಾವೂ ಪ್ರಗತಿ ಹೊಂದುತ್ತೇವೆ ಎಂದು ಭರವಸೆ ನೀಡುತ್ತೇನೆ ಎಂದು ಜೆಫ್ ಬೆಜೋಸ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.