News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಉತ್ತಮ ರಾಜಕಾರಣಿಗಳನ್ನು ರೂಪಿಸಲು ಆರಂಭಗೊಳ್ಳಲಿದೆ ಕೋರ್ಸ್

ನವದೆಹಲಿ : ಉತ್ತಮ ರಾಜಕಾರಣಿಯಾಗಲು ಬಯಸುವವರಿಗಾಗಿ ತರಬೇತಿ ಕೋರ್ಸ್­ಗಳು ಶೀಘ್ರದಲ್ಲೇ ಆರಂಭವಾಗಲಿದೆ.

ರಾಂಬಹು ಮಾಳಗಿ ಪ್ರಬೋಧಿನಿ (RMP) ಎಂಬ ಶಿಕ್ಷಣ ಸಂಸ್ಥೆ ಪ್ರಭಾವಿ ರಾಜಕೀಯ ನಾಯಕರನ್ನು ರೂಪಿಸಲು ತರಬೇತಿ ಕೋರ್ಸ್­ಗಳನ್ನು ಪ್ರಾರಂಭಿಸಲಿದೆ.

ಈ ತರಬೇತಿಯು 9 ತಿಂಗಳ ವಸತಿ ಕೋರ್ಸ್ ಆಗಿದ್ದು, ಇದರಲ್ಲಿ  ರಾಜಕೀಯ, ಪತ್ರಿಕೋದ್ಯಮ, ಪ್ರಭಾವಿ ನಾಯಕತ್ವ ಮತ್ತು ಉತ್ತಮ ಆಡಳಿತದ ಬಗ್ಗೆ ತರಬೇತಿ ನೀಡಲಾಗುತ್ತದೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಟಾನ್­ನಲ್ಲಿ ಈ ಕೋರ್ಸ್ ಆಗಸ್ಟ್ 1 ರಿಂದ ಪ್ರಾರಂಭವಾಗಲಿದೆ.  ಜೂನ್ 30 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಮೊದಲ ಬ್ಯಾಚ್­ನಲ್ಲಿ 40 ವಿದ್ಯಾರ್ಥಿಗಳಿಗೆ ಮಾತ್ರ ತರಬೇತಿ ನೀಡಲಾಗುತ್ತದೆ. ಕನಿಷ್ಠ ವಿದ್ಯಾರ್ಹತೆ ಎಂದರೆ ಪದವಿ ತೇರ್ಗಡೆಯಾಗಿರಬೇಕು. 9 ತಿಂಗಳ ಕೋರ್ಸ್ ಇದಾಗಿದ್ದು,  ಹಾಸ್ಟೆಲ್, ವಸತಿ, ಊಟ ಎಲ್ಲವೂ ಸೇರಿ ಒಟ್ಟು 2.5 ಲಕ್ಷ ರೂ. ನೀಡಬೇಕಾಗುತ್ತದೆ.

ಕೇವಲ ರಾಜಕಾರಣಿಗಳಷ್ಟೇ ಅಲ್ಲದೆ, ನಾಗರಿಕ ಸೇವಾ ಅಧಿಕಾರಿ,  ಪತ್ರಕರ್ತರಾಗಲು ಇಚ್ಛಿಸುವವರೂ ಸಹ ಈ ತರಬೇತಿಯನ್ನು ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಆಡಳಿತಾಧಿಕಾರಿ ಹೇಳಿದ್ದಾರೆ.

ತರಬೇತಿ ಮುಗಿಸಿದ ಬಳಿಕ ವಿದ್ಯಾರ್ಥಿಗಳು ಯಾವ ಪಕ್ಷಕ್ಕೆ ಬೇಕಾದರೂ ಸೇರಿಕೊಳ್ಳಬಹುದು. ಉತ್ತಮ ರಾಜಕಾರಣಿಗಳನ್ನು ರೂಪಿಸಬೇಕೆಂಬುದೇ ಸಂಸ್ಥೆಯ ಉದ್ದೇಶ ಎಂದು ಆರ್­ಎಂಪಿ ಉಪಾಧ್ಯಕ್ಷರಾಗಿರುವ ವಿನಯ್ ಸಹಸ್ರಬುದ್ಧೆ ಅವರು ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top