ಸ್ಮೃತಿ ನಾಗ್ಪಾಲ್. ದೂರದರ್ಶನದಲ್ಲಿ ನಾವೀಕೆಯನ್ನು ನೋಡಿರುವ ಸಾಧ್ಯತೆ ಇದೆ. ಅಲ್ಲಿ ಈಕೆ ಸಂಜ್ಞಾ ಭಾಷೆ ವ್ಯಾಖ್ಯಾನಕಾರಳಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಶ್ರವಣದೋಷವುಳ್ಳವರ ಏಳಿಗೆಗಾಗಿ ದನಿವರಿಯದಂತೆ ದುಡಿಯುವ ಈಕೆಯಲ್ಲಿ ಸಮಾಜೋದ್ಧಾರ ಮಾಡಬೇಕು ಎಂಬ ತುಡಿತವಿದೆ.
ನ್ಯಾಷನಲ್ ಅಸೋಸಿಯೇಶನ್ ಆಫ್ ಡೆಫ್ನ ದೆಹಲಿ ಮೂಲದ ಸ್ವಯಂ ಸೇವಕಿಯಾಗಿರುವ ಈಕೆ ತನ್ನಿಬ್ಬರು ಕಿವಿ ಕೇಳಿಸದ ಒಡ ಹುಟ್ಟಿದವರೊಂದಿಗೆ ಸಂಭಾಷಣೆ ಮಾಡುತ್ತಾ ಮಾಡುತ್ತಾ ಸಂಜ್ಞಾ ಭಾಷೆಯನ್ನು ಕಲಿತಿದ್ದಾಳೆ.
ಪದವಿ ಪಡೆದ ಬಳಿಕವೂ ಉದ್ಯೋಗ ಪಡೆಯಲು ವಿಫಲನಾದ ಕಿವುಡ ಕಲಾವಿದನೊಬ್ಬನ ಭೇಟಿ ಈಕೆಗೆ ’ಅತುಲ್ಯ ಕಲಾ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಲು ಪ್ರೇರಣೆ ನೀಡಿತು.
ಈ ಸಂಸ್ಥೆಯ ಮೂಲಕ ಆಕೆ ಕಿವುಡರಿಗೆ ಉದ್ಯೋಗ ಅವಕಾಶ ದೊರಕಿಸಿಕೊಡುವ, ಅವರಿಗೆ ಶಿಕ್ಷಣ ಪಡೆಯಲು ನೆರವು ನೀಡುವ ಮತ್ತು ಸಂಜ್ಞಾ ಭಾಷೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾಳೆ.
ಸಂಸ್ಥೆಗೆ ಬರುವ ದಾನವನ್ನು ಲಾಭದಾಯಕವಾಗಿ ಪರಿವರ್ತಿಸಲು ಆ ಹಣವನ್ನು ವಸ್ತುಗಳ ಮಾರಾಟಕ್ಕೆ ಕನೆಕ್ಟ್ ಮಾಡಿದ್ದಾಳೆ. ಲೈಫ್ ಸ್ಟೈಲ್ ಬ್ರಾಂಡ್, ಡಿಸೈನ್ ಹೌಸ್, ಕೆಫೆಗಳನ್ನು ತೆರೆದಿದ್ದಾಳೆ. ಅಲ್ಲಿ ಕಿವಿ ಕೇಳಿಸದ ಜನರೇ ಉದ್ಯೋಗಿಗಳಾಗಿದ್ದಾರೆ.
ಇದೀಗ ಈ ಸಂಸ್ಥೆಗೆ ಪೋರ್ಚುಗಲ್ ಮತ್ತು ಡೆನ್ಮಾರ್ಕ್ನಲ್ಲೂ ಬ್ರಾಂಚ್ಗಳಿದ್ದು, ನೆಲ್ಸನ್ ಮಂಡೇಲಾ ಗ್ರಾಸ ಮಶಲ್ ಇನ್ನೋವೇಶನ್ ಅವಾರ್ಡ್, ಇಂಡಿಯಾ ಆಫ್ರಿಕಾ ಯಂಗ್ ವಿಶನರಿ ಫೆಲೋಶಿಪ್ ಸೆರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಸಿಕ್ಕಿವೆ.
2014ರ ಗಣರಾಜ್ಯೋತ್ಸವ ಪೆರೇಡ್ಗೆ ಸಂಜ್ಞಾ ಭಾಷೆ ವ್ಯಾಖ್ಯಾನಕಾರರಾಗಿದ್ದ ಈಕೆ, ಜನಪ್ರಿಯ ಸಂಗೀತಗಾರರಿಂದ ಕಿವುಡ ಜನರಿಗಾಗಿ ಸಂಗೀತವನ್ನೂ ರಚಿಸಿದ್ದಾರೆ. ಸಾಕಷ್ಟು ಮುಂದೆ ಬಂದಿರುವ ಅತುಲ್ಯಕಲಾ ಸಂಸ್ಥೆ ದೇಶ ಮಾತ್ರವಲ್ಲ ಜಾಗತಿಕ ಮಟ್ಟದಲ್ಲೂ ಜನರಿಗೆ ಪ್ರೇರಣೆ ನೀಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.