ಸಿಯೋಲ್: ತಮ್ಮ ತ್ರಿರಾಷ್ಟ್ರ ಪ್ರವಾಸದ ಕೊನೆಯ ಹಂತವಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ದಕ್ಷಿಣ ಕೊರಿಯಾದ ಸಿಯೋಲ್ಗೆ ಬಂದಿಳಿದಿದ್ದಾರೆ. ಅಲ್ಲಿ ಅವರು ಅಧ್ಯಕ್ಷ ಪಾರ್ಕ್ ಗೆಯುನ್ ಹೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಸಿಯೋನ್ ವಿಮಾನನಿಲ್ದಾಣಕ್ಕೆ ಬಂದಿಳಿದ ತಕ್ಷಣ ಮೋದಿ ನೇರವಾಗಿ ಸಿಯೋನ್ ನ್ಯಾಷನಲ್ ಸಿಮೆಟರಿಗೆ ತೆರಳಿ ಹಾರ ಹಾಕುವ ಸಮಾರಂಭದಲ್ಲಿ ಪಾಲ್ಗೊಂಡರು, ಅಲ್ಲದೇ ಹುತಾತ್ಮರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.
ಅಧ್ಯಕ್ಷರನ್ನು ಭೇಟಿಯಾಗುವುದಕ್ಕೂ ಮುನ್ನ ಅವರು ಭಾರತೀಯ ಸಮುದಾಯ ಏರ್ಪಡಿಸಲಿರುವ ಔತನಕೂಟದಲ್ಲಿ ಭಾಗಿಯಾಗಲಿದ್ದಾರೆ. ಈ ಕೂಟದಲ್ಲಿ ಸುಮಾರು 1,500 ಮಂದಿ ಭಾಗಿಯಾಗುವ ಸಾಧ್ಯತೆ ಇದೆ.
ಉಭಯ ದೇಶಗಳ ನಾಯಕರುಗಳು ಮಹತ್ವದ ಹಲವಾರು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ, ಅಲ್ಲದೇ ದ್ವಿಪಕ್ಷೀಯ, ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಭಾನುವಾರ ಮೋದಿ ಮಂಗೋಲಿಯಾ ಪ್ರವಾಸದಲ್ಲಿದ್ದರು. ದಕ್ಷಿಣ ಕೊರಿಯಾ ಅವರ ತ್ರಿರಾಷ್ಟ್ರ ಪ್ರವಾಸದ ಕೊನೆಯ ರಾಷ್ಟ್ರವಾಗಿದೆ. ಮಂಗಳವಾರವೂ ಅವರು ದಕ್ಷಿಣ ಕೊರಿಯಾದಲ್ಲೇ ಇರಲಿದ್ದಾರೆ. ಬಳಿಕ ಭಾರತಕ್ಕೆ ವಾಪಾಸ್ ಆಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.