ಕೇವಲ ಎರಡು ವರ್ಷದಲ್ಲಿ ಇಬ್ಬರು ಯುವಕರು ಆರಂಭಿಸಿದ ಸ್ಟಾಟ್ಅಪ್ನ ವಹಿವಾಟು 10 ಸಾವಿರ ರೂಪಾಯಿಯಿಂದ 1 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಮುಂಬರುವ ವರ್ಷಗಳಲ್ಲಿ ಅದು ಇನ್ನಷ್ಟು ಏರಿಕೆಯಾಗುವ ಎಲ್ಲಾ ಸೂಚನೆಗಳನ್ನು ಅದು ನಿಡುತ್ತಿದೆ.
ಯಶಸ್ವಿ ಉದ್ಯಮಿಗಳಿಂದ ಸ್ಪೂರ್ತಿ ಪಡೆದು ಭರತ್ ಹೆಗ್ಡೆ ಮತ್ತು ದರ್ಶನ್ ದೇಸಾಯಿ InertiaCart ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. 2 ವರ್ಷಗಳ ಹಿಂದೆ ದರ್ಶನ್ನ ಗ್ಯಾರೇಜ್ನಲ್ಲಿ ಕೇವಲ 10 ಸಾವಿರ ರೂಪಾಯಿ ಬಂಡವಾಳದಲ್ಲಿ ಒಬ್ಬ ಡೆಲಿವರಿ ಬಾಯ್ ಮತ್ತು ಒಂದು ಪ್ರಿಂಟಿಂಗ್ ಪ್ರೆಸ್ ಮೂಲಕ ಇದು ಕಾರ್ಯಾರಂಭ ಮಾಡಿತ್ತು.
ಈ ಯುವಕರ ಕಠಿಣ ಪರಿಶ್ರಮದ ಸಲುವಾಗಿ ಕೇವಲ ಎರಡೇ ತಿಂಗಳಲ್ಲಿ ಗ್ರಾಹಕರನ್ನು ಪಡೆಯುವಲ್ಲಿ ಇದು ಯಶಸ್ವಿಯಾಯಿತು. ಯಶಸ್ಸಿನ ಮೊದಲ ಹಂತವಾವಿವರು 5 ಮಂದಿ ಉದ್ಯೋಗಿಗಳನ್ನು ನೇಮಿಸಿದರು. ಒಂದು ಕಂಪನಿಯ ಮಾದರಿಯಲ್ಲಿ ರೂಪಿಸಿದರು. ಹೊಸ ಮೆಶನರಿಗಳ ಬಂಡವಾಳ ಹಾಕಿದರು. ಸಂಬಂಧಿಗಳಿಂದ, ಸ್ನೇಹಿತರಿಂದ ಮತ್ತು ನೆರೆಹೊರೆಯವರಿಂದಲೇ ಇವರು ಹೂಡಿಕೆಯನ್ನು ಪಡೆದರು.
2015ರ ಜನವರಿ 12ರಂದು InertiaCart ಒಂದು ಪ್ರೈವೆಟ್ ಲಿಮಿಟೆಡ್ ಕಂಪನಿಯಾಗಿ ನೋಂದಾಣಿಯಾಯಿತು.
ಪ್ರೊಡಕ್ಟ್ ವಿನ್ಯಾಸ, ಮಾರ್ಕೆಟಿಂಗ್, ಡೆಲಿವರಿಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಎಂಜಿನಿಯರಿಂಗ್ ಪದವೀಧರ ಭರತ್ ಮತ್ತು ಬಿಕಾಂ ಪದವೀಧರ ದರ್ಶನ್ ಅವರ ಪ್ರಯತ್ನದಿಂದಾಗಿ ಇಂದು ಅವರ ಸಂಸ್ಥೆ ಒಂದು ಕೋಟಿ ವಹಿವಾಟು ನಡೆಸುತ್ತಿದೆ. ಆನ್ಲೈನ್ಗಿಂದ ಆಫ್ಲೈನ್ನಲ್ಲಿ ಇವರ ಉದ್ಯಮ ಹೆಚ್ಚು ಪ್ರಗತಿ ಕಾಣುತ್ತಿದೆ. 29 ಮಂದಿ ಉಸ್ಯೋಗಿಗಳ ತಂಡ ಇಲ್ಲಿ ದುಡಿಯುತ್ತಿದೆ.
ಪ್ರಯತ್ನಿಸಿದರೆ ಸ್ವ ಉದ್ಯೋಗದಿಂದ ಸ್ವಾವಲಂಬನೆ ಪಡೆಯುವುದು ಮಾತ್ರವಲ್ಲ ಇತರರಿಗೂ ಉದ್ಯೋಗ ನೀಡಬಹುದು ಎಂಬುದನ್ನು ಇವರು ಸಾಧಿಸಿ ತೋರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.