18 ವರ್ಷದ ಪೂರ್ವಪ್ರಭಾ ಪಾಟೀಲ್ ವಿಶ್ವಸಂಸ್ಥೆಯ ಹೆಡ್ಕ್ವಾರ್ಟರ್ನಲ್ಲಿ ನಡೆದ ಸ್ಥಿರ ಅಭಿವೃದ್ಧಿ ಗುರಿಯ ಎರಡನೇ ಮಲ್ಟಿ ಸ್ಟೇಕ್ಹೋಲ್ಡರ್ ಫೋರಂ ಆನ್ ಸೈನ್ಸ್, ಟೆಕ್ನಾಲಜಿ ಮತ್ತು ಇನ್ನೋವೇಶನ್(ಎಸ್ಟಿಐ)ಯಲ್ಲಿ ಏಷ್ಯಾ ಫೆಸಿಫಿಕ್ನ್ನು ಪ್ರತಿನಿಧಿಸಿದ ಅತೀ ಕಿರಿಯ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರಳಾಗಿದ್ದಾಳೆ.
ಒಂದು ಸಮಯದಲ್ಲಿ ಸ್ಕೂಲ್ ಡ್ರಾಪ್ಔಟ್ ಆಗಿದ್ದ ಈಕೆ ಇದೀಗ ವಿಶ್ವಸಂಸ್ಥೆಯಲ್ಲಿ ಭಾರತವನ್ನು ಮಾತ್ರವಲ್ಲ ಏಷ್ಯಾ ಫೆಸಿಫಿಕ್ನ್ನು ಪ್ರತಿನಿಧಿಸಿದ ಅತೀ ದೊಡ್ಡ ಸಾಧನೆ ಮಾಡಿದ್ದಾಳೆ.
ವೈದ್ಯೆ ರಾಧಾರಾಣಿ ಪಾಟೀಲ್ ಅವರು ಪೂರ್ವ ಅವರನ್ನು ಅತೀ ಕಠಿಣ ಸ್ಥಿತಿಯಲ್ಲಿ ಸಿಂಗಲ್ ಮದರ್ ಆಗಿ ಬೆಳೆಸಿದ್ದು, ಇಂದು ಮಗಳ ಸಾಧನೆ ಕಂಡು ಹೆಮ್ಮೆಪಡುತ್ತಿದ್ದಾರೆ.
ಶಾಲೆಯಲ್ಲಿ ಅತೀವ ಜಾಣೆಯಾಗಿದ್ದ ಪೂರ್ವ ಅವರ ಜಾಣ್ಮೆಯನ್ನು ಸಹಿಸದ ಶಿಕ್ಷಕರು ಅವರನ್ನು ಪದೇ ಪದೇ ಅವಮಾನಿಸಿದಾಗ ಶಾಲೆಯನ್ನು ತೊರೆದು ಬಂದ ಪೂರ್ವ ಅವರಿಗೆ ತಾಯಿಯೇ ಪಾಠ ಕಲಿಸಿದರು.
ಬಳಿಕ ಕಾಲೇಜು ಹಂತದಲ್ಲಿ ಶಾಲೆಗೆ ಸೇರಿಕೊಂಡ ಈಕೆ ತಾಯಿಯಂತೆ ವೈದ್ಯೆಯಾಗಬೇಕೆಂಬ ಗುರಿಯಿಟ್ಟುಕೊಂಡಳು. ಇದೀಗ ಆಕೆಯ ಎಂಬಿಎಬಿಎಸ್ ಸೆಕೆಂಡ್ ಸೆಮಿಸ್ಟರ್ನಲ್ಲಿ ಓದುತ್ತಿದ್ದಾಳೆ. ಮಾತ್ರವಲ್ಲದೇ ಈಕೆ ಹತ್ತು ಹಲವಾರು ಎನ್ಜಿಓಗಳೊಂದಿಗೆ, ವಿಜ್ಞಾನ ಸಂಸ್ಥೆಗಳೊಂದಿಗೆ ಕಾರ್ಯ ಮಾಡುತ್ತಿದ್ದಾಳೆ.
ಆಕೆಯ ಈ ಸಾಧನೆಯೇ ಆಕೆಯನ್ನು ವಿಶ್ವಸಂಸ್ಥೆಯವರೆಗೆ ಕರೆಸಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.