ಬೀಜಿಂಗ್: ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ 24 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಇದರಲ್ಲಿ ಚೀನಾದ ಸಿಚುವಾನ್ ಹಾಗೂ ಕರ್ನಾಟಕ ನಡುವೆ ಸಿಸ್ಟರ್ ಸ್ಟೇಟ್ಸ್ ಒಪ್ಪಂದವೂ ಸೇರಿದೆ.
ಈ ರಾಜ್ಯಗಳ ನಡುವೆ ಗೆಳೆತನ, ಸಹಕಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಒಪ್ಪಂದ ಮಾಡಲಾಗಿದೆ. ಸಿಸ್ಟರ್ ಸ್ಟೇಟ್ ಹಾಗೂ ಸಿಸ್ಟರ್ ಸಿಟಿ ಸೇರಿದಂತೆ ನಾಲ್ಕು ಒಪ್ಪಂದಗಳಿಗೆ ಭಾರತ ಮತ್ತು ಚೀನಾ ಸಹಿ ಹಾಕಿದ್ದು, ಈ ಒಪ್ಪಂದಗಳ ಮೂಲಕ ಶಿಕ್ಷಣ, ನಗರಾಭಿವೃದ್ಧಿ, ರೆಲ್ವೆ, ಬಾಹ್ಯಾಕಾಶ ಮುಂತಾದ ಕ್ಷೇತ್ರಗಳಲ್ಲಿ ಭಾರತದೊಂದಿಗೆ ಸಹಕರಿಸಲಾಗುವುದು ಎಂದು ಚೀನಾ ಭರವಸೆ ನೀಡಿದೆ. ಈ ಒಪ್ಪಂದಗಳ ಒಟ್ಟು ಮೌಲ್ಯ ರೂ.600 ಶತಕೋಟಿ ಎಂದು ಹೇಳಲಾಗಿದೆ.
ಎರಡು ದೇಶಗಳ ರಾಜ್ಯಗಳು ಅಥವಾ ನಗರಗಳ ನಡುವಿನ ಕಾನೂನಾತ್ಮಕ ಇಲ್ಲವೇ ಸಾಮಾಜಿಕ ಒಪ್ಪಂದ ಇದಾಗಿದ್ದು, ವಾಣಿಜ್ಯ, ವ್ಯಾಪಾರ, ಪ್ರವಾಸೋದ್ಯಮ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಕಳೆದ ಸೆಪ್ಟೆಂಬರ್ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭ ಗುಜರಾತ್ ಹಾಗೂ ಗುವಾಂಗ್ಝೋ ನಡುವೆ ಸಿಸ್ಟರ್ ಸಿಟಿ ಒಪ್ಪಂದ ನಡೆದಿತ್ತು.
ಇದೀಗ ಸಿಸ್ಟರ್ ಸಿಟಿ ಒಳಗೊಂಡ ನಾಲ್ಕು ಒಪ್ಪಂದಗಳಿಗೆ ಭಾರತ-ಚೀನಾ ಸಹಿ ಹಾಕಿದ್ದು, ಕರ್ನಾಟಕ- ಸಿಚುವಾನ್, ಚೆನ್ನೈ-ಚಾಂಗ್ಕಿಂಗ್, ಹೈದರಾಬಾದ್-ಕಿಂಗ್ಡಾವ್ ಹಾಗೂ ಔರಂಗಾಬಾದ್-ಡನ್ಹುವಾಂಗ್ಗಳು ಈಗ ಸಿಸ್ಟರ್ ಸಿಟಿಗಳಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.