ನವದೆಹಲಿ: ಬ್ಯುಸಿನೆಸ್ ಪ್ರಯಾಣಿಕರನ್ನು ಆಕರ್ಷಿಸುವುದಕ್ಕಾಗಿ ರೈಲ್ವೇ ಇಲಾಖೆಯೂ ಶೀಘ್ರದಲ್ಲೇ ಅತ್ಯಾಧುನಿಕ ಸೌಲಭ್ಯಗಳುಳ್ಳ ಡಬಲ್ ಡೆಕ್ಕರ್ ರಾತ್ರಿ ರೈಲು ಉದಯ್ ಎಕ್ಸ್ಪ್ರೆಸ್ ಗೆ ಚಾಲನೆ ನೀಡಲಿದೆ.
ಉಯ್ ಎಕ್ಸ್ಪ್ರೆಸ್ ತನ್ನ ಸೇವೆಗಳ ಮೂಲಕ ಮೆಟ್ರೋಪಾಲಿಟನ್ ಸೆಂಟರ್ಗಳನ್ನು ಕನೆಕ್ಟ್ ಮಾಡಲಿದೆ ಎಂದು ರೈಲ್ವೇ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.
ಈ ರೈಲನ್ನು ರಾತ್ರಿ ಪ್ರಯಾಣಿಸಿ ಬೆಳಿಗ್ಗೆ ತಲುಪುವ ಬ್ಯುಸಿನೆಸ್ ಟ್ರಾವೆಲರ್ಗಳಿಗಾಗಿ ನಾವು ತರುತ್ತಿದ್ದೇವೆ. ಇದರಿಂದಾಗಿ ಅವರು ತಮ್ಮ ಹೋಟೆಲ್ ದರವನ್ನು ಉಳಿತಾಯ ಮಾಡಿಕೊಳ್ಳಬಹುದು. ಇದರಲ್ಲಿ ಅತ್ಯಾಧುನಿಕ ಸೌಲಭ್ಯಗಳು ಇರಲಿವೆ ಎಂದು ಅವರು ಹೇಳಿದ್ದಾರೆ.
ಪ್ರಯಾಣಿಕರಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ರೈಲ್ವೇ ಹಲವಾರು ಯೋಜನೆಗಳನ್ನು ಆರಂಭಿಸಿದೆ. ಕೇಟರಿಂಗ್, ಟಿಕೆಟ್ ಬುಕಿಂಗ್, ಕೋಚುಗಳ ಸ್ವಚ್ಛತೆ ಎಲ್ಲವುಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಕಾರ್ಯ ನಡೆಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.