ನವದೆಹಲಿ: ಇಸ್ರೋ ತನ್ನ ಅತೀ ಭಾರದ ರಾಕೆಟ್ ಜಿಎಸ್ಎಲ್ವಿ ಮಾರ್ಕ್ IIIನ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ಪೂರೈಸಿದೆ. ಸಂಜೆ 5.28ರ ಸುಮಾರಿಗೆ ಆಂಧ್ರಪ್ರದೇಶದ ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡಿದೆ.
‘ಮಾನ್ಸ್ಟರ್ ರಾಕೆಟ್’ ಎಂದು ವಿಜ್ಞಾನಿಗಳಿಂದ ಕರೆಯಲ್ಪಟ್ಟ ಈ ರಾಕೆಟ್ ಭಾರತದ ಅತೀ ಬಲಿಷ್ಠ ದೇಶೀ ನಿರ್ಮಿತ ರಾಕೆಟ್ ಆಗಿದೆ. ಭಾರತೀಯರಿಂದ, ಭಾರತದ ಮಣ್ಣಿಂದ ಇದು ನಭಕ್ಕೆ ಚಿಮ್ಮಿದೆ.
200 ಬಲಿಷ್ಠ ಆನೆಗಳ ಭಾರದಷ್ಟು ಇದು ಭಾರವಾಗಿದೆ. 4 ಸಾವಿರ ಕೆಜಿಯನ್ನು ಹೊರುವ ಸಾಮರ್ಥ್ಯ ಇದಕ್ಕಿದೆ. ಅತೀ ಭಾರತ ಸೆಟ್ಲೈಟ್ನ್ನು ಹೊತ್ತೊಯ್ಯಲು ಸಹಾಯಕವಾಗಲಿದೆ.
ಜಿಎಸ್ಎಟಿ-19 ಪ್ರಧಾನಿ ನರೇಂದ್ರ ಮೊದಿಯವರ ಡಿಜಟಲ್ ಇಂಡಿಯಾ ಕನಸನ್ನು ಸಾಕಾರಾಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಭಾರತೀಯರನ್ನು ಬಾಹ್ಯಾಕಾಶಕ್ಕೂ ಹೊತ್ತೊಯ್ಯಬಲ್ಲ ಸಾಮರ್ಥ್ಯ ಈ ರಾಕೆಟ್ಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.