ಬರದಿಂದ ತತ್ತರಿಸಿರುವ ಔರಂಗಬಾದಿನ ಪೊರ್ಗೋನ್ ಗ್ರಾಮದ ಮಹಿಳೆಯರಿಗೆ ನಿತ್ಯ 5 ಮೈಲು ನಡೆದು ಬಾವಿಯಿಂದ ನೀರು ತರುವುದೇ ದೊಡ್ಡ ಸವಾಲಿನ ಕೆಲಸ. ದಿನಕ್ಕೆ ಕನಿಷ್ಠ 15ರಿಂದ 20 ಲೀಟರ್ ನೀರು ಅನಿವಾರ್ಯ. ಕೈಯಲ್ಲಿ, ತಲೆಯಲ್ಲಿ, ಸೊಂಟದಲ್ಲಿ ಕೊಡಪಾನ ಇಟ್ಟುಕೊಂಡು ನೀರನ್ನು ಹೊತ್ತು ಬರಬೇಕಾಗಿತ್ತು. ಇಷ್ಟೊಂದು ನೀರನ್ನು ಅಷ್ಟು ದೂರದಿಂದ ಹೊತ್ತು ತರಬೇಕಾದರೆ ಐದಾರು ಬಾರಿ ಹೋಗಿ ಬರಬೇಕಾಗಿತ್ತು.
ಇದೀಗ ಆ ಗ್ರಾಮದಲ್ಲಿ ಹ್ಯಾಬಿಟೇಟ್ ಫಾರ್ ಹ್ಯುಮ್ಯಾನಿಟಿ ಎಂಬ ಎನ್ಜಿಓ ಹೊಸ ವಿನೂತನ ಐಡಿಯಾವೊಂದನ್ನು ಪರಿಚಯಿಸಿದ್ದು, ಇದೀಗ ಆ ಗ್ರಾಮದ ಮಹಿಳೆಯರ ಬದುಕು ತುಸು ಸರಳಗೊಂಡಿದೆ.
ಒಂದೇ ಬಾರಿಗೆ45 ಲೀಟರ್ ನೀರನ್ನು ತುಂಬಿಸಬಲ್ಲ ಸಿಲಿಂಡ್ರಿಕಲ್ ಪ್ಲಾಸ್ಟಿಕ್ ಡ್ರಮ್ ವಾಟರ್ ವ್ಹೀಲ್ನ್ನು ಎನ್ಜಿಓ ನಿರ್ಮಿಸಿದ್ದು, ಇದು ಮಹಿಳೆಯರ ದೈಹಿಕ ಶ್ರಮವನ್ನು ಅರ್ಧದಷ್ಟು ಕಡಿಮೆಗೊಳಿಸಿದೆ. 500 ವಾಟರ್ ವ್ಹೀಲ್ಗಳನ್ನು ಗ್ರಾಮಸ್ಥರಿಗೆ ಎನ್ಜಿಓ ಹಂಚಿದೆ.
ನೀರನ್ನು ಸುಲಭವಾಗಿ ಬಾವಿಯಿಂದ ಎತ್ತಲು ಇದು ಸಹಾಯಕವಾಗಿದೆ. ತಲೆಯಲ್ಲಿ, ಸೊಂಟದಲ್ಲಿ ಹೊತ್ತೊಯ್ಯುವ ಬದಲು ಕೈಯಲ್ಲಿ ಎಳೆದುಕೊಂಡು ಒಂದೇ ಬಾರಿ 45 ಲೀಟರ್ ನೀರನ್ನು ಮನೆಗೆ ತರಬಹುದು. ಈ ವಾಟರ್ ವ್ಹೀಲ್ ಕೆಳಗೆ ಚಕ್ರಗಳಿದ್ದು ಸುಮಾರು 50 ಲೀಟರ್ ಭಾರ ಹೊರುವ ಸಾಮರ್ಥ್ಯ ಇವುಗಳಿಗಿವೆ. ಇದರಿಂದಾಗಿ ಪದೇ ಪದೇ ಬಾವಿವರೆಗೆ ಹೋಗುವ, ಭಾರ ಹೊರುವ ಶ್ರಮ ತಪ್ಪಿದಂತಾಗಿದೆ. ಮಹಿಳೆಯರ ಜೀವನ ಆರಾಮದಾಯಕವಾಗಿದೆ.
ಈ ಎನ್ಜಿಓ ಔರಂಗಬಾದ್ ಮಾತ್ರವಲ್ಲದೇ ಲಾತೂರ್, ನಂದೇನ್, ಒಸ್ಮಾನಾಬಾದ್ ಮುಂತಾದ ಗ್ರಾಮಗಳಿಗೂ ಒಟ್ಟು 1,621 ವಾಟರ್ ವ್ಹೀಲ್ಗಳನ್ನು ಹಂಚಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.