ಹಲದ್ವಾನಿ: ಉತ್ತರಾಖಂಡದ ಹಲದ್ವಾನಿ ನಗರವನ್ನು ಬಯಲುಶೌಚ ಮುಕ್ತಗೊಳಿಸಬೇಕು ಎಂಬ ಪಣತೊಟ್ಟಿರುವ ಅಲ್ಲಿನ ಮುನ್ಸಿಪಲ್ ಕಾರ್ಪೋರೇಶನ್ ಸ್ವಚ್ಛತೆಯ ಬಗೆಗಿನ ಪೋಸ್ಟರ್ಗಳನ್ನು ಎಲ್ಲಾ ಇ-ರಿಕ್ಷಾಗಳ ಮೇಲೆ ಅಂಟಿಸುತ್ತಿದೆ.
ಅಷ್ಟೇ ಅಲ್ಲದೇ ಆಟೋ ಡ್ರೈವರ್ಗಳು ತಮ್ಮ ಪ್ರಯಾಣಿಕರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಮಾಹಿತಿಗಳನ್ನೂ ನೀಡುತ್ತಿದ್ದಾರೆ.
‘ಇ-ರಿಕ್ಷಾ ಪರಿಸರ ಸ್ನೇಹಿಯಾಗಿದೆ. ಭೂಮಿ, ಜಲ, ವಾಯುವನ್ನು ಮಾಲಿನ್ಯಗಳಿಸುವುದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಪೋಸ್ಟರ್ಗಳು ಅರಿವು ಮೂಡಿಸುತ್ತವೆ. ಬಯಲಿನಲ್ಲಿ ಶೌಚ ಮಾಡದಂತೆ, ಕಸಕಟ್ಟಿಗಳನ್ನು ಕಸದಬುಟ್ಟಿಯಲ್ಲೇ ಹಾಕುವಂತೆ ಜನರಿಗೆ ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಇ-ರಿಕ್ಷಾ ಡ್ರೈವರ್ವೊಬ್ಬರು ತಿಳಿಸಿದ್ದಾರೆ.
ಇ-ರಿಕ್ಷಾಗಳು ಮಾಲಿನ್ಯ ಮುಕ್ತವಾಗಿರುವುದರಿಂದ ಪೋಸ್ಟರ್ ಹಾಕಲು ಅವುಗಳನ್ನೇ ಆಯ್ಕೆ ಮಾಡಿಕೊಂಡಿದ್ದಾಗಿ ಮುನ್ಸಿಪಾಲಿಟಿ ಹೇಳಿದೆ.
ಒಟ್ಟು 230 ಇ-ರಿಕ್ಷಾಗಳು ಹಲದ್ವನಿಯಲ್ಲಿದ್ದು, ಮುನ್ಸಿಪಾಲಿಟಿ 150 ಇ-ರಿಕ್ಷಾಗಳನ್ನು ಆಯ್ಕೆ ಮಾಡಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.