ಗಾಂಧೀನಗರ: ಗೋವಧೆಗೆ ಗುಜರಾತ್ ಸರ್ಕಾರ ಅತ್ಯಂತ ಕಠಿಣ ಶಿಕ್ಷೆಯನ್ನು ಜಾರಿಗೊಳಿಸಿದೆ. ಗೋ ಹಂತಕರು ಇನ್ನು ಮುಂದೆ ಜೀವಾವಧಿ ಶಿಕ್ಷೆಯನ್ನು ಎದುರಿಸಲಿದ್ದಾರೆ.
ಅಲ್ಲಿನ ಸರ್ಕಾರವು ‘ಗುಜರಾತ್ ಪ್ರಾಣಿ ಸಂರಕ್ಷಣಾ(ತಿದ್ದುಪಡಿ)ಮಸೂದೆ 2017’ನ್ನು ಮಾಚ್ನಲ್ಲಿ ಅಸೆಂಬ್ಲಿಯಲ್ಲಿ ಅನುಮೋದನೆಗೊಳಿಸಿತ್ತು. ಬಳಿಕ ಇದು ರಾಜ್ಯಪಾಲರ ಅಂಕಿತವನ್ನೂ ಪಡೆದುಕೊಂಡಿದೆ.
ಈ ಮಸೂದೆ ಪ್ರಸ್ತುತ ಗೋಹತ್ಯೆಗೆ ಇರುವ ಶಿಕ್ಷೆ 7 ವರ್ಷಗಳ ಸೆರೆವಾಸವನ್ನು 14 ವರ್ಷಗಳ ಜೀವಾವಧಿಗೆ ಶಿಕ್ಷೆಗೆ ಏರಿಸಿದೆ. ಅಷ್ಟೇ ಅಲ್ಲದೇ ಅಪರಾಧಿಗಳು 1 ಲಕ್ಷ ರೂಪಾಯಿಯಿಂದ 5 ಲಕ್ಷಗಳವರೆಗೂ ದಂಡವನ್ನು ವಿಧಿಸಬೇಕಾಗುತ್ತದೆ.
ಮಾತ್ರವಲ್ಲದೇ ಗೋ ಹತ್ಯೆಯನ್ನು ಜಾಮೀನು ರಹಿತ ಅಪರಾಧಗಳಡಿ ಸೇರಿಸಿದೆ. ಗೋ ಹತ್ಯೆಯನ್ನು ಮನುಷ್ಯರ ಹತ್ಯೆಗೆ ಸಮಾನಾದ ಅಪರಾಧ ಎಂದು ಪರಿಗಣಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.