ನವದೆಹಲಿ: ವಿಕಿಮೀಡಿಯಾ ಪ್ರಾಜೆಕ್ಟ್ ಮೂಲಕ ನೈಸರ್ಗಿಕ ಪಾರಂಪರಿಕ ತಾಣಗಳನ್ನು ಪ್ರಚಾರಪಡಿಸುವ ಅಂತಾರಾಷ್ಟ್ರೀಯ ಫೋಟೋಗ್ರಾಫಿಕ್ ಸ್ಪರ್ಧೆ ವಿಕಿ ಲವ್ಸ್ ಅರ್ಥ್ ಜೂನ್ 1 ರಿಂದ ಆರಂಭಗೊಂಡಿದ್ದು, ಜೂನ್ 30 ರ ವರೆಗೆ ನಡೆಯಲಿದೆ.
ನೈಸರ್ಗಿಕ ತಾಣಗಳ ಫೋಟೋಗಳನ್ನು ಜನರು ಕ್ಲಿಕ್ಕಿಸಲು ಆ ಮೂಲಕ ಹೆಚ್ಚಿನ ಜನರಿಗೆ ಇವುಗಳ ಬಗ್ಗೆ ತಿಳಿಯಲಿ ಎಂಬ ಕಾರಣಕ್ಕೆ ವಿಕಿ ಲವ್ಸ್ ಅರ್ಥ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಯಾರೂ ಬೇಕಾದರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ತಾವು ಇತ್ತೀಚಿಗೆ ಭೇಟಿಕೊಟ್ಟ ನೈಸರ್ಗಿಕ ತಾಣಗಳ ಫೋಟೋವನ್ನು {{Wiki Loves Earth 2017|in}} ಟೆಂಪ್ಲೇಟ್ನಲ್ಲಿ ಅಪ್ಲೋಡ್ ಮಾಡಬಹುದು. ತಿಂಗಳ ಅಂತ್ಯದಲ್ಲಿ ಜ್ಯುರಿ ಸದಸ್ಯರು ಶ್ರೇಷ್ಠ 10 ಫೋಟೋಗಳನ್ನು ಆಯ್ಕೆ ಮಾಡುವರು.
ಹೆಚ್ಚಿನ ವಿವರಗಳಿಗೆ https://commons.wikimedia.org/wiki/Commons:Wiki_Loves_Earth_2017_in_India ಲಿಂಕ್ನ್ನು ನೋಡಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.