ನವದೆಹಲಿ: ಈ ವರ್ಷ 20 ಸಾವಿರ ಮಂದಿಯನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳುವುದಾಗಿ ಐಟಿ ದಿಗ್ಗಜ ಇನ್ಫೋಸಿಸ್ ಘೋಷಿಸಿದೆ.
ಅಲ್ಲದೇ ಕೇವಲ 400 ಮಂದಿಯನ್ನು ಕಾರ್ಯಕ್ಷಮತೆಯ ಹಿನ್ನಲೆಯಲ್ಲಿ ಕೆಲಸ ತೊರೆಯುವಂತೆ ಆದೇಶಿಸಲಾಗಿದೆ. ಆದರೆ ಈ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕಸಿಯಲಾಗುತ್ತಿದೆ ಎಂದು ಮಾಡಲಾಗುತ್ತಿರುವ ವರದಿಗಳು ಅತಿರೇಕದ್ದು ಎಂದು ಅದು ಹೇಳಿದೆ.
ತಂತ್ರಜ್ಞಾನ ಆಧಾರಿತ ಪರಿವರ್ತನೆಗಳು ನಮ್ಮಂತಹ ಕಂಪನಿಗಳಿಗೆ ಹೊಸ ಹೊಸ ಅವಕಾಶಗಳನ್ನು ನೀಡುತ್ತಿವೆ ಎಂದು ಇನ್ಫೋಸಿಸ್ ಸಿಓಓ ಯುಬಿ ಪ್ರವೀಣ್ ರಾವ್ ಹೇಳಿದ್ದಾರೆ.
‘ಪ್ರತಿ ವರ್ಷದಂತೆ ಈ ವರ್ಷವು ಕರ್ಯಕ್ಷಮತೆಯ ಹಿನ್ನಲೆಯಲ್ಲಿ ಉದ್ಯೋಗ ಕಡಿತ ಮಾಡಿದ್ದೇವೆ. ಈ ಸಂಖ್ಯೆ 300-400 ಆಗಿದೆ’ ಎಂದಿದ್ದಾರೆ.
‘ನಾವು ಹೆಚ್ಚು ಹೆಚ್ಚು ಉದ್ಯೋಗಳನ್ನು ಸೃಷ್ಟಿಸುತ್ತಿದ್ದೇವೆ, ಹೆಚ್ಚು ಜನರನ್ನು ಸೇರಿಸುತ್ತಿದ್ದೇವೆ, ಕೆಲವೇ ಸಂಖ್ಯೆಯ ಉದ್ಯೋಗಿಗಳನ್ನು ಕಳುಹಿಸುತ್ತಿದ್ದೇವೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.